ಸ್ವಾಭಿಮಾನಿಗಳ ವಿರುದ್ದ ಸಿಡಿದೆದ್ದ ಮಂಡ್ಯ ಜನತೆ..!! ಸಿಎಂ ಜೊತೆ ಹೇಳಿದ್ದೇನು ಗೊತ್ತಾ..?

ಲೋಕಸಭಾ ಚುನಾವಣೆಯ ಸಮಯದಲ್ಲಿ ಮಂಡ್ಯ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದ ಸುಮಲತಾ ಮಂಡ್ಯ ಸಂಸದೆಯಾಗಿದ್ದಾರೆ. ಚುನಾವಣೇಯ ಸಮಯದಲ್ಲಿ ಕೊಟ್ಟ ಮಾತುಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಂಡ್ಯದ ಜನತೆ ಮಾತಾನಾಡುಕೊಳ್ಳುತ್ತಿದ್ದಾರೆ. ರೈತರ ಜೊತೆ ಯಾವಾಗಲೂ ನಾನು ಇರುತ್ತೇನೆ, ಮಂಡ್ಯದ ಜನರ ಪರ ನಿಲ್ಲಲ್ಲು ಸದಾ ನಾನು ಸಿದ್ದ ಎಂದು ಹೇಳಿದ ಸುಮಲತಾ ಸದ್ಯ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಮಂಡ್ಯದ ಜನ ಮಾತಾನಾಡಿಕೊಳ್ಳುತ್ತಿದ್ದಾರೆ.
ಇತ್ತಿಚಿಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ನೆನ್ನೆಯಷ್ಟೆ ಮಂಡ್ಯದಲ್ಲಿ ರೈತರೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಒಂದು ದಿನವಾದರೂ ಕೂಡ ಬಣ್ಣದ ಮಾತುಗಳನ್ನು ಆಡಿದ ಸ್ವಾಭಿಮಾನಿ ಜನ ಬಂದೆ ಇಲ್ಲ.. ಆದರೆ ಮತ ಹಾಕದಿದ್ದರೂ ಮಂಡ್ಯದ ಜನರತ್ತ ಅಪಾರ ಪ್ರೀತಿ ಉಳಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಮೃತನ ನಿವಾಸಕ್ಕೆ ಭೇಟಿ ನೀಡಿ 5 ಲಕ್ಷ ಪರಿಹಾರ ವಿತರಿಸಿದ್ದಾರೆ. ಸುರೇಶ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಸರ್ಕಾರದ ಪರವಾಗಿ 5 ಲಕ್ಷ ರೂಪಾಯಿ ಚೆಕ್ ವಿತರಿಸಿ ಧೈರ್ಯ ತುಂಬಿದರು.. ಯಾವುದೇ ಕಾರಣಕ್ಕೂ ಯಾರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮ ಜೊತೆ ನಾನೀದ್ದೀನಿ ಎಂದು ಕುಮಾರಸ್ವಾಮಿಯವರು ತಿಳಿಸಿದರು.. ಚುನಾವಣೆ ಸಂದರ್ಭದಲ್ಲಿ ನಾವು ನಿಮ್ಮ ಜೊತೆ ನಿಲ್ಲಬೇಕಿತ್ತು ಎಂದು ಕೆಲ ರೈತರು ಪಶ್ಚಾತಾಪ ವ್ಯಕ್ತಪಡಿಸಿದ ಘಟನೆ ಕೂಡ ಆ ಸಮಯದಲ್ಲಿ ನಡೆಯಿತು. ಸುಮಲತಾ ಅವರು ಬರದೆ ಇದ್ದದನ್ನು ಕಂಡು ರೈತರು ಕೆಂಡಾಮಂಡಲವಾಗಿದ್ದಾರೆ ಸುಮಲತಾ ಅವರಿಗೆ ವೋಟು ಹಾಕಿ ತಪ್ಪು ಮಾಡಿದ್ದೆವು ಎನ್ನುವ ಮಾತು ಕೂಡ ಕೇಳಿ ಬಂದಿದ್ದು ಮಾತ್ರ ಸುಳ್ಳಲ್ಲ..
Comments