"ನಾನು ಪಾಕ್ ತಂಡದ ಅಮ್ಮನಲ್ಲ'' ಸಾನಿಯಾ ಮಿರ್ಜಾ ಹೀಗೆ ಹೇಳಿದ್ಯಾಕೆ..?

18 Jun 2019 2:36 PM | General
2699 Report

ಮೊನ್ನೆ ಮೊನ್ನೆಯಷ್ಟೆ ಭಾರತ ಮತ್ತು ಪಾಕಿಸ್ತಾನದ ಹೈವೋಲ್ಟೇಜ್ ಪಂದ್ಯ ಮುಕ್ತಾಯವಾಗಿದೆ.. ಆದರೆ ಅದಕ್ಕೆ ಸಂಬಂಧಿಸಿದ ವಾದ ವಿವಾದಗಳು ಇನ್ನೂ ಕೊನೆಗೊಂಡಿಲ್ಲ…ಭಾರತ ಮತ್ತು ಪಾಕಿಸ್ತಾನದ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು… ಪಂದ್ಯ ಮುಗಿದ ಮೇಲೆ ಪಾರಕ್ ಆಟಗಾರರ ಹುಕ್ಕಾ ಪಾರ್ಟಿ ಸದ್ಯ ಸಾಕಷ್ಟು ಸುದ್ದಿಯಲ್ಲಿದೆ. ಪಾಕ್ ಆಟಗಾರ ಶೋಯೆಬ್ ಮಲ್ಲಿಕ್ ನಂತರ ಭಾರತದ ಟೆನಿಸ್ ಆಟಗಾರ್ತಿ ಹಾಗೂ ಮಲ್ಲಿಕ್ ಪತ್ನಿ ಸಾನಿಯಾ ಮಿರ್ಜಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ನಟಿ ವೀಣಾ ಮಲ್ಲಿಕ್ ಟ್ವೀಟರ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ವೀಣಾ ಮಲ್ಲಿಕ್, ಹುಕ್ಕಾ ಪಾರ್ಟಿಯಲ್ಲಿ, ಸಾನಿಯಾ ಮಿರ್ಜಾ ಕಾಣಿಸಿಕೊಂಡಿರುವುದನ್ನು ವಿರೋಧಿಸಿದ್ದಾಳೆ. ಸಾನಿಯಾ ತಾಯಿಯಾಗಿ ಮತ್ತು ಆಟಗಾರ್ತಿಯಾಗಿ ಈ ರೀತಿಯ ಪಾರ್ಟಿಗೆ ಹೋಗುವುದು ಎಷ್ಟು ಸರಿ ಎಂದು ವೀಣಾ ಮಲ್ಲಿಕ್ ಸಾನಿಯಾ ಮಿರ್ಜಾ ಅವರನ್ನು ಕಾಲೆಳೆದಿದ್ದಳು. ಇದಕ್ಕೆ ಸಾನಿಯಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ವೀಣಾ,‌ ನಾನು ನನ್ನ ಮಕ್ಕಳನ್ನು ಶಿಷಾ ಪ್ಯಾಲೇಸ್ ಗೆ ಕರೆದುಕೊಂಡು ಹೋಗಿರಲಿಲ್ಲ. ಈ ಬಗ್ಗೆ ನಿಮಗೆ ಹಾಗೂ ಪ್ರಪಂಚ ಚಿಂತೆ ಮಾಡುವ ಅಗತ್ಯವಿಲ್ಲ.ನನ್ನ ಮಗುವನ್ನು ನೋಡಿಕೊಳ್ಳುವುದು ಹೇಗೆ ಎನ್ನವುದು ನನಗೆ ಗೊತ್ತು. ನಾನು ಪಾಕಿಸ್ತಾನಿ ತಂಡದ ಡಯಟಿಶಿಯನ್ ಅಲ್ಲ. ಅವರ ತಾಯಿಯೂ ಅಲ್ಲ. ಪ್ರಿನ್ಸಿಪಲ್ ಮತ್ತು ಶಿಕ್ಷಕಿಯೂ ಕೂಡ ಅಲ್ಲ ಎಂದು ಟ್ವಿಟ್ ಮಾಡಿದ್ದಾರೆ. ಒಟ್ಟಾರೆ ಮ್ಯಾಚ್ ಅಷ್ಟೆಯೇ ಇಬ್ಬರ ಟ್ವೀಟ್ ವಾರ್ ಕೂಡ ಹಸಿ ಬಿಸಿ ಸುದ್ದಿ ಮಾಡುತ್ತಿದೆ.

Edited By

Manjula M

Reported By

Manjula M

Comments