ಮತ್ತೊಬ್ಬ ಸ್ಟಾರ್ ನಟನ ಬೆಡ್ ರೂಂ ರಹಸ್ಯ ರಿವೀಲ್ ಮಾಡಿದ ನಟಿ ಶ್ರೀರೆಡ್ಡಿ..!

18 Jun 2019 1:33 PM | General
1989 Report

ಕೆಲ ತಿಂಗಳುಗಳ ಹಿಂದೆ ಬಣ್ಣದ ಜಗತ್ತಿನಲ್ಲಿ ಮೀಟೂ ಕಾರುಬಾರು ಜೋರಾಗಿಯೇ ನಡೆಯುತ್ತಿತ್ತು..  ಒಬ್ಬೊಬ್ಬರೆ ತಮಗಾದ ಅನ್ಯಾಯಗಳನ್ನು ಮೀಟೂ ಮುಖಾಂತರ ಹೊರ ಹಾಕುತ್ತಿದ್ದರು.. ಅದರಲ್ಲಿ ಹೆಚ್ಚು ಸದ್ದು ಮಾಡಿದ್ದು ತೆಲುಗು ನಟಿ ಶ್ರೀ ರೆಡ್ಡಿ…ಈಗಾಗಲೇ ಹಲವು ಸಿನಿಮಾ ತಾರೆಯರ ಬಗ್ಗೆ ಲೈಂಗಿಕ ಕಿರುಕುಳ, ಖಾಸಗಿ ಜೀವನದ ವಿಚಾರಗಳನ್ನು ಬಹಿರಂಗಗೊಳಿಸಿ ಸುದ್ದಿಯಾಗಿದ್ದ ತೆಲುಗು ನಟಿ ಶ್ರೀರೆಡ್ಡಿ ಈಗ ತಮಿಳು ಸ್ಟಾರ್ ನಟ ವಿಶಾಲ್ ವಿರುದ್ಧ ಹೊಸದೊಂದು ಆರೋಪವನ್ನು ಮಾಡಿದ್ದಾರೆ.

ಮೀಟೂ ಆರೋಪಗಳು ಸಾಕಷ್ಟು ಸ್ಟಾರ್ ನಟರ ಜೀವನದ ಮೇಲೆ ಪ್ರಭಾವ ಬೀರಿದಂತೂ ಸುಳ್ಳಲ್ಲ… ದಕ್ಷಿಣ ಭಾರತದ ಸಿನಿ ಕಲಾವಿದರ ಸಂಘದ ಮಹಾಕಾರ್ಯದರ್ಶಿ ಹುದ್ದೆಗೆ ಚುನಾವಣೆಗೆ ನಿಂತಿರುವ ವಿಶಾಲ್ ಹೆಣ್ಣು ಬಾಕ ಎಂದು ಶ್ರೀರೆಡ್ಡಿ ವಿಶಾಲ್ ಮೇಲೆ ಆರೋಪ ಮಾಡಿದ್ದಾರೆ.  ಫೇಸ್ ಬುಕ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಶ್ರೀರೆಡ್ಡಿ ವಿಶಾಲ್ ತಮ್ಮ ಜತೆ ನಟಿಸುವ ನಟಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಹಣ ಕೊಟ್ಟು ಹುಡುಗಿಯರ ಜತೆ ಲೈಂಗಿಕ ಬಯಕೆ ತೀರಿಸಿಕೊಳ್ಳುತ್ತಾರೆ. ಅವರಿಗೆ ಹುಡುಗಿಯರನ್ನು ಪೂರೈಸುವವರು ಯಾರು ಎಂದೂ ನನಗೆ ಗೊತ್ತು. ವಿಶಾಲ್ ಒಬ್ಬ ಮಹಾನ್ ವಂಚಕ. ನನ್ನ ತಾಯಿ, ವೃತ್ತಿ ಮೇಲೆ ಆಣೆ ಇಟ್ಟು ಈ ಮಾತು ಹೇಳುತ್ತಿದ್ದಾನೆ. ಒಂದು ವೇಳೆ ಅವರು ನನ್ನನ್ನು ಕೊಂದರೂ ನಾನು ಇದೇ ಮಾತನ್ನು ಹೇಳುವೆ. ಧೈರ್ಯವಿದ್ದರೆ ವಿಶಾಲ್ ತಾವು ಯಾವುದೇ ಹುಡುಗಿಯ ಸಹವಾಸ ಮಾಡಿಲ್ಲ ಎಂದು ಸಾಬೀತುಪಡಿಸಲಿ' ಎಂದು ಸವಾಲು ಹಾಕಿದ್ದಾರೆ. ಒಟ್ಟಾರೆಯಾಗಿ ಮತ್ತೆ ಶ್ರೀ ರೆಡ್ಡಿ ಅರೆಬೆತ್ತಲಾಗಿ ಬೀದಿಗಿಳಿದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ…

Edited By

Manjula M

Reported By

Manjula M

Comments