'ಕುಮಾರಸ್ವಾಮಿಯವರೇ ದಯವಿಟ್ಟು ನನ್ನ ಅಂತ್ಯ ಸಂಸ್ಕಾರಕ್ಕೆ ಬನ್ನಿ' ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ..!!

17 Jun 2019 4:58 PM | General
335 Report

ರೈತರು ಸಕಾಲಕ್ಕೆ ಮಳೆ ಆಗದೇ ಬೆಳೆ ಕೈಗೆ ಬರದೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.. ಸಾಕಷ್ಟು ರೈತರು ಆತ್ಮಹತ್ಯೆಯ ಹಾದಿಯನ್ನು ಹಿಡಿಯುತ್ತಿದ್ದಾರೆ ಇದೀಗ ಮಂಡ್ಯ ಜಿಲ್ಲೆಯ ಮತ್ತೊಬ್ಬ ರೈತ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಮುಖ್ಯಮಂತ್ರಿ ಅವರು ಬರುವಂತೆ ವಿಡಿಯೋ ಮಾಡಿ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ, ಸಂತೇಬಾಚಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ನಡೆದಿದೆ.

ಸಾಲಬಾದೆ ತಾಳಲಾರದೇ ಸುರೇಶ್ ಎಂಬ ರೈತ ನೇಣಿಗೆ ಕೊರಳೊಡ್ಡಿದ್ದಾರೆ. ಸುರೇಶ್ (45) ಎಂಬುವವರು ಆತ್ಮಹತ್ಯೆಗೆ ಶರಣಾದ ರೈತರಾಗಿದ್ದಾರೆ. ರೈತ ಸುರೇಶ್ ಅವರು ಸಿಎಂ ಅಭಿಮಾನಿಯೂ ಆಗಿದ್ದು, ರೈತರನ್ನು ಕಾಪಾಡಿ ಎಂದು ಮನವಿ ಮಾಡಿ ಆತ್ಮಹತ್ಯೆಗೆ  ಮಾಡಿಕೊಂಡಿದ್ದಾರೆ.  ದಯವಿಟ್ಟು ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಕಷ್ಟಕ್ಕೆ ಪರಿಹಾರ ನೀಡಿ.. ನಿಮ್ಮ ಆಶ್ವಾಸನೆಗಳನ್ನೆ ರೈತರು ನಂಬಿಕೊಂಡಿದ್ದಾರೆ. ದಯವಿಟ್ಟು ಅವರಿಗೆ ಪರಿಹಾರ ನೀಡಿ, ಕೆರೆ ಕುಂಟೆಗಳನ್ನು ತುಂಬುವಂತೆ ಮಾಡಿ.. ಕೆಲವರ್ಷಗಳಿಂದ ಇಲ್ಲಿ ಬರಗಾಲವಿದೆ. ರೈತರ ಬಗ್ಗೆ ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಕೂಡ ನೀರು ಕೊಟ್ಟು ನ್ಯಾಯ ನೀಡಿ ಎಂದಿದ್ದಾರೆ. ಈ  ಮೂಲಕವಾದರೂ ಸಮ್ಮಿಶ್ರ ಸರ್ಕಾರ ಸಾಧನೆ ಮಾಡಲಿ ಎಂದು ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತನ ಅಂತ್ಯ ಸಂಸ್ಕಾರ ಆದ ಮೇಲೆ ಈ ವೀಡಿಯೋ ಕುಟುಂಬಸ್ಥರಿಗೆ ಸಿಕ್ಕಿದೆ. ಕೆಆರ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

Edited By

Manjula M

Reported By

Manjula M

Comments