ಜೆಡಿಎಸ್ ನಾಯಕನಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ..!!

17 Jun 2019 1:01 PM | General
583 Report

ಸಿನಿಮಾ ರಂಗದವರಿಗೂ ರಾಜಕೀಯದವರಿಗೂ ಒಂದು ರೀತಿಯ ನಂಟು ಅನಿಸುತ್ತದೆ.. ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಲೋಕಸಭಾ ಚುನಾವಣೆಯ ಸಮಯದಲ್ಲಿ  ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಮತ್ತು ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ ನಟರಿಗೂ ವಾಕ್ಸಮರ ನಡೆದಿದ್ದು ಗೊತ್ತೆ ಇದೆ.. ಇದೀಗ ಸಾ ರಾ ಮಹೇಶ್ ಗೆ ಸ್ಯಾಂಡಲ್ ವುಡ್ ನಟಿ ತಿರುಗೇಟು ಕೊಟ್ಟಿದ್ದಾಳೆ.

ಎಸ್.. ಕೊಡಗು ಸಂತ್ರಸ್ತರ ಮನೆಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದ ನಟಿ ಹರ್ಷಿಕಾ ಪೂಣಚ್ಚ ವಿರುದ್ಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅಸಮಾಧನವನ್ನು ಹೊರಹಾಕಿದ್ದರು. ಇದೀಗ ಸ್ಯಾಂಡಲ್ ವುಡ್ ನಟಿ, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸಾ.ರಾ. ಮಹೇಶ್ ಗೆ ತಿರುಗೇಟು ಕೊಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ  ನಟಿ ಹರ್ಷಿಕಾ ಪೂಣಚ್ಚ, ಇದ್ದಿದ್ದು ಇದ್ಹಂಗೆ ಹೇಳಿದ್ರೆ, ಎದ್ಬಂದು ಎದೆಗೆ ಒದ್ದಂಗಾಯ್ತು, ಪ್ರಜಾಪ್ರಭುತ್ವದಲ್ಲಿ ನನಗೂ ಕೂಡ  ಕೇಳುವ ಸ್ವಾತಂತ್ರ್ಯವಿದೆ. ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿದ್ದೇನೆ. ನಾನು ಮನವಿ ಮಾಡಿದ್ದರಲ್ಲಿ ತಪ್ಪು ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.  ಸಚಿವರು ನನ್ನ ವಿದ್ಯಾರ್ಹತೆ ಏನು ಎಂದು ಕೇಳಿದ್ದಾರೆ. ನಾನು ಎಂಜಿನಿಯರಿಂಗ್ ಮುಗಿಸಿದ್ದೇನೆ. ಅದರಲ್ಲೂ ಡಿಸ್ಟಿಂಕ್ಷನ್ ವಿದ್ಯಾರ್ಥಿ ಎಂದು ಹೇಳುವ ಮೂಲಕ ಸಚಿವರಿಗೆ ತಿರುಗೇಟು ಕೊಟ್ಟಿದ್ದಾರೆ.. ಒಟ್ಟಿನಲ್ಲಿ ಸಿನಿಮಾರಂಗದವರಿಗೂ ಹಾಗೂ ರಾಜಕೀಯದವರಿಗೂ ಎಣ್ಣೆ ಸೀಗೆಕಾಯಿ ಇದ್ದ ಹಾಗೆ ಅನ್ನೋದು ಆಗಾಗ ಸಾಬೀತಾಗುತ್ತಿರುತ್ತದೆ..

Edited By

Manjula M

Reported By

Manjula M

Comments