ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತೆಗೆದುಕೊಂಡ ದೃಢ ನಿರ್ಧಾರ ಏನ್ ಗೊತ್ತಾ..?

10 Jun 2019 4:47 PM | General
375 Report

ಈ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ  ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಜಯಶಾಲಿಯಾದರು… ಈ ಗೆಲುವಿನಲ್ಲಿ ಜೋಡೆತ್ತು ಎಂದೇ ಹೆಸರು ಮಾಡಿದ ಯಶ್ ಮತ್ತು ದರ್ಶನ್ ಜೊತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡಾ ಅಷ್ಟೇ ಶ್ರಮವಹಿಸಿದ್ದರು. ಇವರೆಲ್ಲರು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.. ನಾವು ನೋಡಿದ ಹಾಗೆ ಚುನಾವಣೆಯ ಪ್ರಚಾರದಲ್ಲಿ ರಾಕ್ ಲೈನ್ ವೆಂಕಟೇಶ್ ಚುನಾವಣೆಯ ಸಮಯದಲ್ಲಿ ಸುಮಲತಾ ಜೊತೆಯಲ್ಲಿಯೇ ಇರುತ್ತಿದ್ದರು.. ಈಗಲೂ ಕೂಡ ರಾಕ್ ಲೈನ್ ವೆಂಕಟೇಶ್  ಸುಮಲತಾ ಪರವಾಗಿಯೇ ಇರುತ್ತಾರೆ..

ಸುಮಲತಾ ಏನೇ ಮಾಡಿದರೂ ಅವರ ಜತೆಗೆ ರಾಕ್ ಲೈನ್ ಅಣ್ಣನಂತೆ ಬೆಂಗಾವಲಾಗಿ ಇದ್ದೇ ಇರುತ್ತಾರೆ. ಚುನಾವಣೆ ಪ್ರಚಾರದಿಂದ ಹಿಡಿದು ಮತ ಎಣಿಕೆ ದಿನವೂ ರಾಕ್ ಲೈನ್ ವೆಂಕಟೇಶ್ ಜತೆಗೇ ಇದ್ದರು. ಈಗಲೂ ಸುಮಲತಾ ಕುಟುಂಬ ಸದಸ್ಯರಂತೇ ಇರುವ ರಾಕ್ ಲೈನ್ ಮಂಡ್ಯ ಜನರ ಪ್ರೀತಿಯ ಋಣ ತೀರಿಸಲು ಮಹತ್ವದ ನಿರ್ಧಾರವೊಂದನ್ನು ಮಾಡಿದ್ದಾರೆ. ಈ ವಿಚಾರವನ್ನು ಖಾಸಗಿ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನು ಮುಂದೆ ರಾಕ್ ಲೈನ್ ನಿರ್ಮಾಣ ಮಾಡುವ ಎಲ್ಲಾ ಸಿನಿಮಾಗಳ ಪೋಸ್ಟರ್, ಟೈಟಲ್ ಕಾರ್ಡ್ ಗಳಲ್ಲಿ 'ಮಂಡ್ಯ ಜಿಲ್ಲೆಯ ಸ್ವಾಭಿಮಾನ ಮತ್ತು ಜನರ ಆಶೀರ್ವಾದ' ಎಂದು ಹಾಕಿಸುತ್ತಾರಂತೆ. ಆ ಮೂಲಕ ಮಂಡ್ಯ ಜನರ ಪ್ರೀತಿಯ ಋಣ ತೀರಿಸಲು ಮುಂದಾಗುವುದಾಗಿ ರಾಕ್ ಲೈನ್ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಮಂಡ್ಯದ ಸ್ವಾಭಿಮಾನಿ ಜನಕ್ಕೆ ರಾಕ್’ಲೈನ್ ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.. ಮಂಡ್ಯದ ಸ್ವಾಭಿಮಾನಕ್ಕೆ ಈ ಲೋಕಸಭಾ ಚುನಾವಣೆ ಕನ್ನಡಿ ಹಿಡಿದಂತೆ ಆಗಿದೆ..

Edited By

Manjula M

Reported By

Manjula M

Comments