ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ..!! ಗ್ರಾಮಸ್ಥರ ಆಕ್ರೋಶ..!!!

08 Jun 2019 12:31 PM | General
434 Report

ದೇವರು ಎಂದರೆ ಸಾಕು ಎಲ್ಲರಿಗೂ ಕೂಡ ಭಕ್ತಿ ಹೆಚ್ಚಾಗಿರುತ್ತದೆ.. ಆದರೆ ಕೆಲವು ಕಿಡಿಗೇಡಿಗಳು ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ  ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ.. ದೇವರಿಗೆ ಹೂವಿನ ಹಾರ ಹಾಕುವ ಬದಲು ಚಪ್ಪಲಿ ಹಾರ ಹಾಕಿ ಅಮಾನವೀಯತೆ ಮೆರೆದಿದ್ದಾರೆ.  ಪೂಜೆ ಬಳಿಕ ದೇವಸ್ಥಾನದಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಿಡಿಗೇಡಿಗಳಿಂದ ನಂದಿ ವಿಗ್ರಹಕ್ಕೆ ಚಪ್ಪಲಿ ಹಾಕಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಶ್ವಾನ ದಳ ಕರೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವಂತೆ ಆಗ್ರಹಿಸಿದ್ದಾರೆ.

ಕೂಡಗಿ ಎನ್ ಟಿಪಿಸಿ ಪೊಲೀಸ್ ಠಾಣೆ ಪಿಎಸ್‍ಐ ಬಸವರಾಜ್ ಅವಟಿ ದೇವಸ್ಥಾನಕ್ಕೆ ಭೇಟಿ, ಪರಿಶೀಲನೆ ನಡೆಸಿದರು.ವಿಜಯಪುರ, ಬೀದರ್ ಜಿಲ್ಲೆಯ ಹಲವೆಡೆ ನಿನ್ನೆ ಭಾರೀ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಹಲವೆಡೆ ಮರಗಳು ನೆಲಕ್ಕುರುಳಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿದೆ. ವಿಜಯಪುರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ನಿನ್ನೆ ತಡರಾತ್ರಿಯವರೆ ಗುಡುಗು ಸಹಿತ ಬಿದ್ದ ಭಾರೀ ಮಳೆಗೆ ಜಿಲ್ಲೆಯ ನಾಲತವಾಡ್ ಪಟ್ಟಣದಲ್ಲಿ 160 ವರ್ಷದಷ್ಟು ಹಳೆಯದಾದ ಬೃಹತ್ ಆಲದ ಮರ ನೆಲಕ್ಕುರುಳಿದೆ. ಇದರ ನಡುವೆ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವುದು ಸದ್ಯ ಯಾರು ಎಂಬುದು ತಿಳಿದು ಬಂದಿಲ್ಲ…ಪೊಲೀಸರು ಕೃತ್ಯ ಎಸಗಿರುವವರು ಯಾರು ಎಂಬ ಹುಡುಕಾಟದಲ್ಲಿ ಇದ್ದಾರೆ.

 

Edited By

Manjula M

Reported By

Manjula M

Comments