ಸಾಮಾಜಿಕ ಜಾಲತಾಣದಲ್ಲಿ ಸುಧಾಮೂರ್ತಿಯವರಿಗೆ ಅವಮಾನ..!!

06 Jun 2019 11:42 AM | General
789 Report

ಕಳೆದ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇನ್ಫೋಸಿಸ್ ನ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರು ಬಂದಿದ್ದರು.. ಅವರ ಕಾರ್ಯಕ್ರಮವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಟಿವಿ ಮುಂದೆ ಕೂತಿದ್ದಂತೂ ಸುಳ್ಳಲ್ಲ… ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಅವರ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು…ಅವರ ಸಾಧನೆಗಳನ್ನ ಕೇಳಿ ಪಾಸಿಟೀವ್ಸ್ ಕಮೆಂಟ್ ಗಳೇ ಹೆಚ್ಛಾಗಿದ್ದವು… ಸಾಕಷ್ಟು ಅಭಿಮಾನಿಗಳು ಅವರ ಮಾತುಗಳಿಂದ ಪ್ರೇರೆಪಿತರಾಗಿರೋದಂತು ನಿಜ…

ಈಗಿರುವಾಗ ಸಾಧಕಿ ಹಾಗೂ ಸಮಾಜ ಸುಧಾರಕಿ ಸುಧಾಮೂರ್ತಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ  ಅವಮಾನ ಮಾಡಲಾಗಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಮಾಜಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಹಡಪದ ತನ್ನ ಫೇಸ್‍ಬುಕ್ ಮೂಲಕ ಸುಧಾಮೂರ್ತಿ ಅವರನ್ನು ಅವಮಾನಿಸಿದ್ದಾರೆ. ಮಲ್ಲಿಕಾರ್ಜುನ ಹಡಪದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನಿವಾಸಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ `ಸೋಗಲಾಡಿ ಸುಧಾರಕಿ’ ಎಂದು ಸುಧಾಮೂರ್ತಿ ಅವರನ್ನು ಅವಮಾನ ಮಾಡಿದ್ದಾರೆ.ಸಮಾಜ ಸೇವಕಿ ಸುಧಾಮೂರ್ತಿ ಬಗ್ಗೆ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಫೇಸ್‍ಬುಕ್‍ನಲ್ಲಿ ಮಲ್ಲಿಕಾರ್ಜುನ ಹಡಪದಗೆ ಜನರು ಹಿಗ್ಗಾಮುಗ್ಗಾ ತರಾಟೆಗೊಂಡಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಮಾಜ ಸುಧಾರಕಿಯಾದ ಸುಧಾಮೂರ್ತಿಯವರು ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ.. ಅವರನ್ನು ಅವಮಾನಿಸಿರುವ ಈತನಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

 

Edited By

Manjula M

Reported By

Manjula M

Comments