ಮಾಜಿ ಸಂಸದೆ ರಮ್ಯಾ ಕಾಲೆಳೆದ ಹಾಸ್ಯನಟ ಬುಲೆಟ್ ಪ್ರಕಾಶ್..!!

05 Jun 2019 9:41 AM | General
214 Report

ಇತ್ತಿಚಿಗೆ ನಟಿ, ಮಾಜಿ ಸಂಸದೆ, ಕಾಂಗ್ರೆಸ್​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯ ಅವರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಎಂದರೆ ಸಾಕು ಕೆಂಡಕಾರುವವರೇ ಹೆಚ್ಚು.. ರಮ್ಯ ತಮ್ಮ ಟ್ವಿಟ್ಟರ್ ನಲ್ಲಿ ಯಾವಾಗಲೂ ಬಿಜೆಪಿ ಸರ್ಕಾರವನ್ನು ಖಂಡಿಸುತ್ತಲೆ ಇರುತ್ತಾರೆ.. ಅದರಲ್ಲೂ ಮೋದಿಯನ್ನು ತೆಗಳಿ ಯಾವಾಗಲೂ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಇದರಿಂದ ಮೋದಿ ಅಭಿಮಾನಿಗಳು ಪದೇ ಪದೇ ರಮ್ಯಾ ವಿರುದ್ದ ಗರಂ ಆಗುತ್ತಿರುತ್ತಾರೆ.. ಹಾಸ್ಯನಟ ಬುಲೆಟ್ ಪ್ರಕಾಶ್ ಕೂಡ ರಮ್ಯಾ ವಿರುದ್ದ ಸಾಕಷ್ಟು ಬಾರಿ ಗರಂ ಆಗಿದ್ದರು..

ರಮ್ಯ ತಮ್ಮ ಟ್ವಿಟರ್​ ಖಾತೆಯಲ್ಲಿ ಇರುವ ಹಳೆ ಟ್ವಿಟರ್​ಗಳನ್ನು ಡಿಲೀಟ್​ ಮಾಡಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಹಲವು ರಾಜಕೀಯ ನಾಯಕರು ರಮ್ಯ ಅವರನ್ನು ಕಾಲೆಳೆದಿದ್ದರು. ಈಗ ಈ ಸಾಲಿಗೆ ಮತ್ತೊಬ್ಬರು ಸೇರಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಹಾಸ್ಯನಟ ಬುಲೆಟ್​ ಪ್ರಕಾಶ್​ ಅವರು ರಮ್ಯ ಅವರ ಈ ಬೆಳವಣಿಗೆ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಎಲೆಕ್ಷನ್ನಲ್ಲಿ ವೋಟ್ ಹಾಕದೆ ಜೂಟು ಆಗಿದ್ದರು. ಊರೆಲ್ಲ ಜನರ ಜೊತೆ ಫೈಟು, ಮಂಡ್ಯ ಟು ಬೆಂಗಳೂರು ಶಿಫ್ಟ್​​,  ಮೋದಿ ಹವಾಗೆ ಟ್ವಿಟರ್ ಅಕೌಂಟ್ ಡಿಲಿಟ್ಟು, ಬೇಕಿತ್ತಾ ಮೆಡಮ್ ಇಷ್ಟೆಲ್ಲಾ ಗಿಲಿಟ್ಟು ಎಂದು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ರಮ್ಯ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಒಟ್ಟಾರೆಯಾಗಿ ರಮ್ಯ ಒಂದಿಲ್ಲೊಂದು ಸುದ್ದಿ ಮಾಡುತ್ತಾ ದಿನ ಸದ್ದು ಮಾಡುತ್ತಿದ್ದಾರೆ.. ಇನ್ನೂ ಮುಂದೆ ಸಾಮಾಜಿಕ ಜಾಲತಾಣಗಳಿಗೆ ಗುಡ್ ಬಾಯ್ ಹೇಳಿ ಸುಮ್ಮನೆ ಇರುತ್ತಾರೋ ಅಥವಾ ಮತ್ತೆ ತಮ್ಮ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments