ಮತದಾನ ಮಾಡದ ರಮ್ಯಾ ವಿರುದ್ದ ಮತ್ತೆ ತಿರುಗಿ ಬಿದ್ದ ನೆಟ್ಟಿಗರು..! ಕಾರಣ ಏನ್ ಗೊತ್ತಾ..?

01 Jun 2019 11:08 AM | General
235 Report

ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ.. ಹಲವಾರು ಬಾರಿ ಬಿಜೆಪಿ ಪಕ್ಷ ಹಾಗೂ  ಮೋದಿಯವರ ವಿರುದ್ದ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ.. ಇದರಿಂದ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು ಕೂಡ ರಮ್ಯಾ ಯಾಕೋ ಬುದ್ದಿ ಕಲಿತಂಗೆ ಕಾಣುತ್ತಿಲ್ಲ.. ಮತದಾನದ ಸಂದರ್ಭದಲ್ಲಿಯೂ ಕೂಡ ರಮ್ಯ ಮತ ಚಲಾವಣೆ ಮಾಡಿರಲಿಲ್ಲ… ಅಂಬಿಯವರು ನಿಧನರಾದಾಗಲೂ ಕೂಡ ಬಂದಿರಲಿಲ್ಲ.. ಇದರಿಂದ ರಮ್ಯ ಮಂಡ್ಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಟ್ವೀಟ್ ಮಾಡಿ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಶುಭಕೋರಿದ್ದಾರೆ. ಆದರೆ ಅವರು ಮಾಡಿರುವ ಟ್ವಿಟ್‌ ಮಾತ್ರ ವ್ಯಂಗ್ಯಭರತವಾಗಿದು ಇದೀಗ ವಿವಾದಕ್ಕೆ ಗುರಿಯಾಗಿದೆ.. 1970ರಲ್ಲಿ ಇಂದಿರಾಗಾಂಧಿ ಅವರು ಮಾತ್ರ ಹಣಕಾಸು ಖಾತೆಯನ್ನು ನಿಭಾಯಿಸಿದ್ದರು. ಇಂದು ನೀವು ನಿಭಾಯಿಸಲು ಮುಂದಾಗಿದ್ದೀರಿ. ನೀವು ಅಧಿಕಾರ ಸ್ವೀಕಾರವಾಗಿರುವ ಕಾರಣ ಮಹಿಳೆಯರಿಗೆ ಇದರಿಂದ ಹೆಮ್ಮೆಯಾಗುತ್ತಿದೆ. ಇನ್ನು ದೇಶದಲ್ಲಿ GDP ಸುಧಾರಿಸಿಲ್ಲ. ನೀವು ಅರ್ಥವ್ಯವಸ್ಥೆಗೆ ಚೇತರಿಕೆ ತರುತ್ತೀರಿ ಎಂದು ನಾನು ನಂಬಿದ್ದೇನೆ. ನಿಮಗೆ ನಮ್ಮ ಬೆಂಬಲವಿದೆ. ಶುಭಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ. ರಮ್ಯಾ ಅವರ ಟ್ವೀಟ್‌ಗೆ ಸಾಕಷ್ಟು ವ್ಯಂಗ್ಯಮಿಶ್ರಿತ ಪ್ರತಿಕ್ರಿಯೆಗಳು ಹೊರಬಂದಿದ್ದು, ಮತ ಚಲಾವಣೆ ಮಾಡದ ಅವರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.ಒಟ್ಟಿನಲ್ಲಿ ರಮ್ಯ ಒಂದಲ್ಲ ಒಂದು ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವುದು ಕೇವಲ ಟ್ವೀಟ್ ಗಳಿಂದ ಮಾತ್ರ.. ಇದರಿಂದ ನೆಟ್ಟಿಗರು ಕೆಂಡಾಮಂಡಲವಾಗುತ್ತಿರುತ್ತಾರೆ

Edited By

Manjula M

Reported By

Manjula M

Comments