ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಆಸ್ಪತ್ರೆಗೆ ದಾಖಲು..!!

17 May 2019 10:41 AM | General
12356 Report

ಕುಂದಗೋಳ ಉಪಚುನಾವಣೆಯ ಪ್ರಚಾರಕ್ಕೆ ಹೋಗಲು ಅಣಿಯಾಗಿದ್ದ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಶೃತಿಯವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ನಡೆದಿದೆ.. ಶೃತಿಯವರಿಗೆ ಆಯಂಜಿಯೋಡಿಮಾ ಎಂಬ ಚರ್ಮ ಕಾಯಿಲೆ ಉಂಟಾಗಿದ್ದು ಆ ಕಾರಣಕ್ಕಾಗಿ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ… ಕುಂದಗೋಳ ಉಪಚುನಾವಣೆಯ ಪ್ರಚಾರಕ್ಕೆ ಹೋಗುವ ಸಂದರ್ಭದಲ್ಲಿಯೇ ಹೀಗಾಗಿದೆ ಎಂದು ಶೃತಿ ಬೇಸರಿಸಿಕೊಂಡಿದ್ದಾರೆ…

ಕುಂದಗೋಳ ಉಪ ಚುನಾವಣೆಯ ಪ್ರಚಾರಕ್ಕೆ ಹುಬ್ಬಳ್ಳಿಗೆ ಹೋಗಲು ಬೆಳಗ್ಗೆ 5 ಗಂಟೆಗೆ ಎದ್ದಿದ್ದ ಅವರಿಗೆ ತುಟಿ ಕೊಂಚ ಊದಿಕೊಂಡಂತೆ ಆಗಿದೆ..ನಂತರ ನಾಲಿಗೆ ದಪ್ಪ ಆಗಲು ಪ್ರಾರಂಭವಾಗಿದ್ದು ಮಾತನಾಡಲೂ ಆಗದಂತೆ ನಾಲಗೆ ಮರಗಟ್ಟಿದಂತಾಗಿದೆ.. ಸ್ವಲ್ಪ ಹೊತ್ತಿಗೆ ಉಸಿರಾಡುವುದು ಕಷ್ಟವಾದಾಗ ತಕ್ಷಣ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬುದು ತಿಳಿದುಬಂದಿದೆ. ಇದರ ಬಗ್ಗೆ ಪ್ರತಿಕ್ರಿಯೇ ನೀಡಿರುವ ನಟಿ ಶೃತಿ ಅವರು, ಅಲರ್ಜಿ ಆದ ಸ್ವಲ್ಪ ಸಮಯದಲ್ಲಿಯೆ ಉಸಿರಾಡುವುದು ಕಷ್ಟವಾಗಿದೆ.. ಈ ರೀತಿಯ ಅಲರ್ಜಿ ಆದಾಗ ಶ್ವಾಸಕೋಶದ ಸುತ್ತಮುತ್ತಲ ಜಾಗ ಊದಿಕೊಂಡು ಗಂಟಲು ಹಿಚುಕಿದ ಅನುಭವವಾಗಿ ಉಸಿರಾಟ ಕಷ್ಟವಾಗುತ್ತದೆ. ತಕ್ಷಣವೇ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋದೆ. ಅವರು ಐವಿ ಇಂಜೆಕ್ಷನ್‌ ಕೊಟ್ಟರು. ಮಧ್ಯಾಹ್ನದ ತನಕ ಆಸ್ಪತ್ರೆಯಲ್ಲಿದ್ದು ವಾಪಸಾಗಿದ್ದೇನೆ. ಈಗ ಚುನಾವಣಾ ಪ್ರಚಾರದಲ್ಲಿ ನಿರತಳಾಗಿದ್ದೇನೆ ಎಂದು ತಿಳಿಸಿದ್ದಾರೆ…

Edited By

Manjula M

Reported By

Manjula M

Comments