ಕೋಳಿ ತುಂಬಿದ ಟ್ರಾಕ್ಟರ್ ಪಲ್ಟಿ..!! ಮಾನವೀಯತೆ ಮರೆತ ಜನ ಮಾಡಿದ್ದೇನು ಗೊತ್ತಾ..?

16 May 2019 4:58 PM | General
319 Report

ಜನರಿಗೆ ಮಾನವೀಯತೆ ಅನ್ನೋದು ತುಂಬಾನೇ ಮುಖ್ಯ…ಕೆಲವೊಂದು ಸ್ಥಳಗಳಲ್ಲಿ ಜನರು ಮಾನವೀಯತೆ ಇಲ್ಲದ ಹಾಗೆ ನಡೆದುಕೊಳ್ಳುತ್ತಾರೆ.. ಕೆಲವೊಮ್ಮೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ ಯಾರು ಸಹಾಯಕ್ಕಾಗಿ ಬರುವುದಿಲ್ಲ…ಇಂತಹ ಪ್ರಕರಣಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ನಡೆದಿವೆ… ಮಾನವೀಯತೆ ಮರೆತು ನಡೆದುಕೊಳ್ಳದ ಪ್ರಕರಣಗಳು ಮಾಸುವ ಮುನ್ನವೇ ದಾವಣಗೆರೆಯಲ್ಲಿ ಮತ್ತೊಂದು ಘಟನೆ ನಡೆದಿದೆ..

ದಾವಣಗೆರೆಯಲ್ಲಿ ಕೋಳಿ ತುಂಬಿದ್ದ ಟ್ರಾಕ್ಟರ್ ಪಲ್ಟಿ ಆಗಿದೆ. ಟ್ರಾಕ್ಟರ್ ಪಲ್ಟಿಯಾಗಿದ್ದೆ  ತಡ ಚಾಲಕನನ್ನು ರಕ್ಷಿಸುವ ಬದಲು, ಜನರು ನಾ ಮುಂದು.. ತಾ ಮುಂದು ಎನ್ನುವಂತೆ ಕೋಳಿಗಳನ್ನು ಬಾಚಿಕೊಂಡು ಮನೆಗೆ ಹೊಯ್ದಿದ್ದಾರೆ. ದಾವಣಗೆರೆಯ ಆರೀಫ್ ಮತ್ತು ಸಂತೋಷ್ ಎಂಬುವರಿಗೆ ಸೇರಿದ 800 ಕೋಳಿಗಳನ್ನು ದಾವಣಗೆರೆಯಿಂದ ದ್ಯಾಮೇನಹಳ್ಳಿಯಲ್ಲಿರುವ ಕೋಳಿ ಫಾರ್ಮ್ ಗೆ ತೆಗೆದುಕೊಂಡು ಹೋಗಲಾಗುತ್ತಿತ್ತು… ಇಂತಹ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ದ್ಯಾಮೇನಹಳ್ಳಿಯ ಬಳಿ ಪಲ್ಟಿಯಾಗಿದೆ.. ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಅನೇಕ ಕೋಳಿಗಳು ಸತ್ತು ಬಿದ್ದಿವೆ. ಈ ಕೋಳಿಗಳನ್ನು ಬಿಡದೇ ಜನರು ಮನೆಗೆ ಹೊತ್ತೊಯ್ದಿದ್ದಾರೆ. ಚಾಲಕನನ್ನು ರಕ್ಷಿಸದೆ ಜನರು ಮಾನವೀಯತೆಯನ್ನು ಮರೆತು ವರ್ತಿಸಿರುವುದು ನಿಜಕ್ಕೂ ಶೋಚನೀಯ.. ಜನ ಯಾವಾಗ ಬದಲಾಗುತ್ತಾರೋ ಗೊತ್ತಿಲ್ಲ…

Edited By

Manjula M

Reported By

Manjula M

Comments