ಅತ್ತೆಯನ್ನು ಮನೆಗೆ ಬರದಂತೆ ತಡೆಯಲು ಅಳಿಯ ಮಾಡಿದ ಖತರ್ನಾಕ್ ಫ್ಲಾನ್..!!

16 May 2019 3:05 PM | General
596 Report

ಮದುವೆಯಾಗಿ ಮಗಳನ್ನು ಅಳಿಯನ ಮನೆಗೆ ಕಳುಹಿಸಿ ಬಿಟ್ಟರೆ ಸಾಕಪ್ಪಾ ಅಂತ ಕೆಲವು ಪೋಷಕರು ಯೋಚನೆ ಮಾಡುತ್ತಿರುತ್ತಾರೆ. ಮದುವೆ ಮಾಡಿ ಕೊಟ್ಟ ಮೇಲೆ ಹೆಣ್ಣು ಮಕ್ಕಳ ಮನೆಗೆ ತಂದೆ ತಾಯಿ ಹೋಗುವುದು ಕಾಮನ್… ಆದರೆ ಇಲ್ಲೊಬ್ಬ ಮಹಾರಾಯ ತನ್ನ ಅತ್ತೆ ಪದೇ ಪದೇ ಮನೆಗೆ ಬರುತ್ತಿದ್ದಕ್ಕೆ ಏನ್ ಮಾಡಿದ್ದಾನೆ ಗೊತ್ತಾ..? ತನ್ನ ಮನೆಗೆ ಅತ್ತೆ ಪದೇ ಪದೇ ಬರುವುದನ್ನು ತಡೆಯಲು ಜೇಡರ ಹುಳವನ್ನು ಮನೆಯಲ್ಲಿ ಸಾಕಿಕೊಂಡಿರುವುದಾಗಿ ಅಳಿಯನೊಬ್ಬ ರೆಡ್ಡಿಟ್ ನಲ್ಲಿ ಹೇಳಿಕೊಂಡಿದ್ದಾನೆ. 

ಹೌದು…ತನ್ನ ಹೆಂಡತಿಯ ಜೊತೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯ ಮನೆಗೆ ಆತನ ಹೆಂಡತಿಯ ತಂದೆ ತಾಯಿ ಪದೇ ಪದೇ ಬರುತ್ತಿದ್ದರು. ಅದರಲ್ಲೂ ಅತ್ತೆ ಮಾತ್ರ ಮನೆಗೆ ಬಂದರೆ ಸೇಮ್ ಹುಚ್ಚಿ ತರ ಆಡುತ್ತಿದ್ದಳು.. ಇದರಿಂದ ಆತನ ಪ್ರೈವೆಸಿಗೆ ಅಡ್ಡಿಯಾಗುತ್ತಿತ್ತು... ಈ ವಿಚಾರವನ್ನು ಆತ ತನ್ನ ಪತಿಗೆ ಹೇಳಿಕೊಂಡಿದ್ದರೂ ಆಕೆ ಅದನ್ನು ಕೇಳುವುದಕ್ಕೆ ಸಿದ್ದವಿರಲಿಲ್ಲ…ಇದರಿಂದ ಬೇಸರಗೊಂಡ ಆತ ತನ್ನ ಅತ್ತೆಗೆ ಜೇಡವನ್ನು ಕಂಡರೆ ಸಿಕ್ಕಾಪಟ್ಟೆ ಭಯ ಎಂಬ ವಿಚಾರ ತಿಳಿದು ಅತ್ತೆ ಮನೆಗೆ ಬರುವುದನ್ನು ತಡೆಯಲು ಟರಾಂಟುಲಾ ಎಂಬ ಜೇಡರ ಹುಳುವನ್ನು ತಂದು ಮನೆಯಲ್ಲಿ ಸಾಕಿಕೊಂಡಿದ್ದಾನೆ. ಈ ವಿಷಯ ತಿಳಿದ ಆತನ ಅತ್ತೆ ಇವರ ಮನೆ ಹತ್ತಿರವೂ ಸುಳಿಯಲಿಲ್ಲವಂತೆ. ಈ ವಿಚಾರವನ್ನು ಆತ ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಇದಕ್ಕೆ ಹಲವುನೆಟ್ಟಿಗರು ಕಮೆಂಟ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಒಂದು ವೇಳೆ ನಿಮ್ಮ ಅತ್ತೆನೂ ಇದೆ ರೀತಿ ಮನೆಗೆ ಬರ್ತಿದ್ರೆ ನೀವು ಈ ರೀತಿಯ ಟಿಪ್ಸ್ ಅನ್ನು ಟ್ರೈ ಮಾಡಿ ಎಂದು ಹಲವರು ಕಮೆಂಟ್  ಮಾಡಿದ್ದಾರೆ.

Edited By

Manjula M

Reported By

Manjula M

Comments