Becarefull:  ಹೆಲ್ಮೆಟ್ ಇಲ್ಲ ಅಂದ್ರೆ ಇನ್ಮುಂದೆ ಪೆಟ್ರೋಲ್ ಸಿಗಲ್ಲ..!!!

16 May 2019 1:47 PM | General
320 Report

ಈಗಾಗಲೇ ಅಪಘಾತಗಳ ಪ್ರಮಾಣವನ್ನು ಕಡಿಮೆಮಾಡಲು ಹಾಗೂ ಅದರಿಂದ ಸುರಕ್ಷಿತವಾಗಿ ಇರಲು ರಸ್ತೆ ಹಾಗೂ ಸಾರಿಗೆ ವಿಭಾಗವು ಸಾಕಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.. ಅಷ್ಟೆ ಅಲ್ಲದೆ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಹೆಲ್ಮೆಟ್ ಕಡ್ಡಾಯ ಎಂದರೂ ಬೈಕ್ ಸವಾರರು ಅದನ್ನೆಲ್ಲಾ ಲೆಕ್ಕಕ್ಕೆ ಇಡದೇ ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡುತ್ತಾರೆ.. ಹಾಗಾಗಿ   ಇದೀಗ ಹೊಸ ನೀತಿಯೊಂದು ಜೂನ್ 1 ರಿಂದ ಜಾರಿಯಾಗುತ್ತಿದೆ. ಬೈಕ್ ಹಾಗೂ ಸ್ಕೂಟರ್ ಸವಾರರು ಹೆಲ್ಮೆಟ್ ಇಲ್ಲದಿದ್ರೆ, ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಸಿಗೋದಿಲ್ಲ.

ಹೌದು… ಹೊಸ ನೀತಿ ಜಾರಿಯಾಗುತ್ತಿರೋದು ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದಲ್ಲಿ. ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ದಿಟ್ಟ ಕ್ರಮ ಕೈಗೊಂಡಿದೆ. ಜಿಲ್ಲಾ ಆಡಳಿತ ವಿಭಾಗ ಇದೀಗ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆಯನ್ನು ನೀಡಿದೆ. ಹೆಲ್ಮೆಟ್ ಇಲ್ಲದೆ ಬರುವ ಯಾವುದೇ ಬೈಕ್ ಹಾಗೂ ಸ್ಕೂಟರ್ ಸವಾರರಿಗೆ ಪೆಟ್ರೋಲ್ ಮಾರಾಟ ಮಾಡದಂತೆ ಈ ಸೂಚನೆಯಲ್ಲಿ ತಿಳಿಸಲಾಗಿದೆ. ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಬಂಕ್ ಗೆ ಹೋಗುವ  ಸವಾರರ ಕುರಿತು ಪೊಲೀಸ್ ವಿಭಾಗ ಮಾಹಿತಿ ಕಲೆ ಹಾಕಲಿದೆ. ಪೆಟ್ರೋಲ್ ಬಂಕ್ ಸಿಸಿಟಿ ದೃಶ್ಯಗಳನ್ನು ಆಧರಿಸಿ ಸವಾರರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ಇನ್ನೂ ಈ ನಿಯಮಾ  ನಮ್ಮ ದೇಶಕ್ಕೆ ಬಂದರೆ ಬೈಕ್ ಸವಾರರು ಎಚ್ಚೆತ್ತುಕೊಳ್ಳಬಹುದು. ಆಗ ಅಪಘಾತದ ಪ್ರಮಾಣವು ಕೂಡ ಕಡಿಮೆಯಾಗುತ್ತದೆ..

Edited By

Manjula M

Reported By

Manjula M

Comments