ರಾತ್ರೋ ರಾತ್ರಿ ಫೇಮಸ್ ಆದ RCB ಗರ್ಲ್ ದಿನ ಕಣ್ಣೀರು ಹಾಕ್ತಿರೋದು ಯಾಕ್ ಗೊತ್ತಾ..?

15 May 2019 9:34 AM | General
1985 Report

ಐಪಿಎಲ್’ನಲ್ಲಿ ಈ ಬಾರಿ ಆರ್ ಸಿ ಬಿ ಉತ್ತಮ ಪ್ರದರ್ಶನ ಕೊಟ್ಟಿಲ್ಲವಾದರೂ ಅಭಿಮಾನಿಗಳಗಳನ್ನು ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದೆ.. ಆದರೆ ಆರ್ ಸಿ ಬಿಯ ಕೊನೆ ಪಂದ್ಯ ನೋಡಲು ಬಂದಿದ್ದ ಯುವತಿಯೊಬ್ಬಳು ರಾತ್ರೋ ರಾತ್ರಿ ಸೆಲಬ್ರೆಟಿಯಾಗಿ ಬಿಟ್ಟಿದ್ದಾಳೆ… ಆರ್‌.ಸಿ.ಬಿ.ಯು ಈ ಬಾರಿ ಕಪ್ ನಮ್ದೆ ಎನ್ನುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ…ಕೊನೆಯ ಪಂದ್ಯ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ದ ಗೆಲ್ಲುವ ಮೂಲಕ ಈ ಬಾರಿಯ ಐಪಿಎಲ್ ಗೆ ವಿದಾಯ ಹೇಳಿತ್ತು…ಇದೇ ಪಂದ್ಯವನ್ನು ‌ವೀಕ್ಷಿಸಲು ಆಗಮಿಸಿದ್ದ ದೀಪಿಕಾ ಘೋಷ್ ಎನ್ನುವ ಯುವತಿ ಆರ್.ಸಿ.ಬಿ.ಗೆ ಚಿಯರ್ಸ್ ಮಾಡುತ್ತಿದ್ದಳು. ಇದು ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ವೈರಲ್ ಆಗಿದ್ದಾಳೆ.

ಈಕೆಯ ಹೆಸರಲ್ಲಿ ಈಗಾಗಲೇ ಸಾಕಷ್ಟು ನಕಲಿ ಖಾತೆಗಳು ಪ್ರಾರಂಭವಾಗಿವೆ.. ಇವುಗಳನ್ನು ಫಾಲೋ ಮಾಡಬೇಡಿ ಎಂದು ಘೋಷ್ ತಿಳಿಸಿದ್ದಾರೆ…ಲಕ್ ಅಂದ್ರೆ ಇದೇ ಅನ್ಸುತ್ತೆ.. ಒಂದೇ ಒಂದು ರಾತ್ರಿಯಲ್ಲಿ ಲಕ್ಷ ಲಕ್ಷ ಜನ ಪಾಲೋಯರ್ಸ್ ಸಂಪಾದನೆ ಮಾಡಿದ್ದಾಳೆ ಈ ಆರ್ ಸಿ ಬಿ ಚಿಯರ್ಸ್ ಗರ್ಲ್.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಾವುಟ ಹಿಡಿದು ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಿರುವ ಆರ್‌ಸಿಬಿ ಫ್ಯಾನ್ ಚೆಂದದ ಹುಡುಗಿ ಕಣ್ಣೀರು ಸುರಿಸುವಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾಮುಕರ ಆಟ ಆರಂಭವಾಗಿದೆ. ಅಶ್ಲೀಲ ಕಮೆಂಟ್‌ಗಳಿಂದ ದೀಪಿಕಾ ಘೋಷ್ ತೀವ್ರವಾಗಿ ನೊಂದಿದ್ದಾರೆ. ಐಪಿಎಲ್ 2019ರಲ್ಲಿ ಬೆಂಗಳೂರಿನ ಕೊನೆಯ ಪಂದ್ಯದ ವೇಳೆ ದೀಪಿಕಾ RCB ಬಾವುಟ ಹಿಡಿದು ಮಿಂಚಿದ್ದರು. ಗೂಗಲ್ ಸರ್ಚ್‌ನಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನೇ ಹಿಂದಿಕ್ಕಿದ್ದರು.. ರಾತ್ರೋ ರಾತ್ರಿ ಪೇಮಸ್ ಆದ ಈ ಹುಡುಗಿಗೆ ಇದೀಗ ಒಂಥರಾ ಸಂಕಟ ಎದುರಾಗಿದೆ.

Edited By

Manjula M

Reported By

Manjula M

Comments