ಕಮಲ್‌ ಹಾಸನ್ ನಾಲಿಗೆ ಕತ್ತರಿಸಬೇಕು..!! ಹೀಗೆ ಹೇಳಿದ್ದು ಯಾರು..?

14 May 2019 12:56 PM | General
497 Report

ಈ ರಾಜಕೀಯದಲ್ಲಿ ಮಾತುಗಳು ಎಲ್ಲಿಂದ ಎಲ್ಲಿಗೆ ಹೋಗುತ್ತವೆ ಎನ್ನುವುದೇ ತಿಳಿಯುವುದಿಲ್ಲ…ನಾಲಿಗೆಯನ್ನು ಹೇಗೆ ಬೇಕೋ ಹಾಗೆ ಹರಿಬಿಡುತ್ತಾರೆ.. ಈಗಾಗಲೇ ಸಾಕಷ್ಟು ರಾಜಕಾರಣಿಗಳು ಒಬ್ಬರ ಮೇಲೆ ಒಬ್ಬರು ಸುಖಾಸುಮ್ಮನೆ ಆರೋಪಗಳನ್ನು ಹೇರುತ್ತಿದ್ದಾರೆ.. ಇದೀಗ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂದು ಹೇಳಿಕೆ ನೀಡಿದ ಎಂಎನ್‌ಎಂ ಸಂಸ್ಥಾಪಕ ಕಮಲ್‌ ಹಾಸನ್ ಅವರ ನಾಲಿಗೆ ಕತ್ತರಿಸಬೇಕು ಎಂದು ತಮಿಳುನಾಡಿನ ಸಚಿವ ರಾಜೇಂದ್ರ ಬಾಲಾಜಿ ಹೇಳಿಕೆ ನೀಡಿದ್ದಾರೆ.

ಚುನಾವಣೆಯ ಕಾಯ್ದೆಯ ಅನ್ವಯ ಈ ಮಾತನ್ನಯ ಹೇಳಿರುವ ಕಮಲಹಾಸನ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಎಐಎಡಿಎಂಕೆ ಸಚಿವರೂ ಆಗಿರುವ ಅವರು ಆಗ್ರಹಿಸಿದ್ದಾರೆ. "ಅವರ ನಾಲಿಗೆ ಕತ್ತರಿಸಬೇಕು... ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂದು ಅವರು ಹೇಳಿದ್ದಾರೆ. ಭಯೋತ್ಪಾದನೆಗೆ ಧರ್ಮ ಇಲ್ಲ. ಭಯೋತ್ಪಾದಕ ಹಿಂದೂ ಅಲ್ಲ; ಮುಸ್ಲಿಂ ಅಥವಾ ಕ್ರೈಸ್ತನೂ ಅಲ್ಲ" ಎಂದು ಹೈನುಗಾರಿಕೆ ಅಭಿವೃದ್ಧಿ ಖಾತೆ ಸಚಿವ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.. ಮುಸ್ಮಿಂ ಮತಗಳನ್ನು ಸೆಳೆಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು..ಒಟ್ಟಿನಲ್ಲಿ ರಾಜಕೀಯವನ್ನು ತಮ್ಮ ತಮ್ಮ ಗಾಳವನ್ನಾಗಿ ಎಲ್ಲರೂ ಕೂಡ ಬಳಸಿಕೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ಈ ಹೇಳಿಕೆ ಯಾವ ರೀತಿಯ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments