'ನಿಖಿಲ್ ಎಲ್ಲಿದ್ದೀಯಪ್ಪ..' ಸಿನಿಮಾಗೆ ಹೀರೋ, ಪ್ರೊಡ್ಯೂಸರ್ ಫಿಕ್ಸ್..!!!

11 May 2019 11:03 AM | General
1224 Report

ಲೋಕಸಮರದ ಹೊತ್ತಿನಲ್ಲಿ ಒಂದಷ್ಟು ಪದಗಳು ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದವು.. ಅದರಲ್ಲಿ ನಿಖಿಲ್ ಎಲ್ಲಿದಿಯಪ್ಪಾ ಎನ್ನುವ ಡೈಲಾಗ್ ಅಂತೂ ವಿಶ್ವ ಪ್ರಸಿದ್ದಿ ಆಗಿ ಬಿಟ್ಟಿದೆ… ಎಲ್ಲಿ ನೋಡಿದರೂ ನಿಖಿಲ್ ಎಲ್ಲಿದಿಯಪ್ಪಾ ಅನ್ನುವ  ಮಾತು ಈಗಲೂ ಕೂಡ ಕೇಳಿ ಬರುತ್ತಿದೆ. ಈ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಸಾಕಷ್ಟು ಜನ ಫಿಲ್ಮ್ ಚೇಂಬರ್ ಗೆ ಹೋಗಿದ್ದಾದರೂ ಕೂಡ ಆ ಹೆಸರಿನ ಟೈಟಲ್ ನ ಯಾರಿಗೂ ಇನ್ನೂ ನೀಡಿಲ್ಲ.. ಇದೀಗ ಆ ಸಿನಿಮಾಗೆ ಹೀರೋ ಮತ್ತು ಪ್ರೊಡ್ಯೂಸರ್ ಸಿಕ್ಕಿದ್ದಾಗಿದೆ.

ನೆನ್ನೆ ಮಂಡ್ಯ ಜಿಲ್ಲೆಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಯವರು 10ರಿಂದ15ವರ್ಷ ರಾಜಕಾರಣ ಮಾಡಿದವರಿಗೂ ನನ್ನ ಮೊದಲ ಚುನಾವಣೆ ಕೊಟ್ಟಷ್ಟು ಅನುಭವ ಕೊಟ್ಟಿರುವುದಕ್ಕೆ ಸಾಧ್ಯವೇ ಇಲ್ಲ...ಕೆಲವರು ನಾನು ಮಂಡ್ಯಕ್ಕೆ ಬರ್ತಿಲ್ಲ ಅಂತ ಪ್ರಶ್ನೆ‌ ಮಾಡುತ್ತಾರೆ, ನಾನು ಮಂಡ್ಯಕ್ಕೆ ಟೀ ಕಾಫಿ ಕುಡಿಯುವುದಕ್ಕೆ ಬರುವುದಿಲ್ಲ. ಕೆಲಸ ಮಾಡಬೇಕು ಅಂತಾ ಬರ್ತೀನಿ ಸುಮ್ನೆ ಬರೋದಲ್ಲ ಎನ್ನುತ್ತಲೇ ಅಭಿಷೇಕ್ ಗೆ ಅಂಬರೀಶ್ ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು. ಇನ್ನೂ ಬಹಿರಂಗ ಸಭೆಯಲ್ಲಿ ಮಾತನಾಡಿ ನಾನು ಇಲ್ಲಿ ಬಾಡಿಗೆ ಮನೆ ಮಾಡಲು ಬಂದಿಲ್ಲ. ಸ್ವಂತ ಮನೆ ಮಾಡಿ ಇಲ್ಲೆ ಇರುತ್ತೇನೆ ಎಂದು ನಿಖಿಲ್‌ ತಿಳಿಸಿದ್ದಾರೆ. 'ನಿಖಿಲ್ ಎಲ್ಲಿದ್ದೀಯಪ್ಪ..' ಎನ್ನುವುದು ಅಮೇರಿಕದಲ್ಲಿಯೂ ಫೇಮಸ್ ಆಗಿದೆಯಂತೆ. ಈ ಟೈಟಲ್ಗೆ ಬಾರಿ ಡಿಮ್ಯಾಂಡ್ ಅಂದ್ರು. ಅದು ನನ್ನ ಟೈಟಲ್..ನಾನೇ ಆ ಸಿನಿಮಾಗೆ ಹೀರೋ  ಪುಟ್ಟರಾಜಣ್ಣನೇ ಪ್ರೊಡ್ಯೂಸರ್ ಎಂದು ತಮಾಷೆಯಾಗಿಯೇ ನಿಖಿಲ್ ಹೇಳಿದರು. ಒಟ್ಟಿನಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪ..' ಸಿನಿಮಾಗೆ ಹೀರೋ ಮತ್ತು ಪ್ರೋಡ್ಯೂಸರ್ ಇಬ್ಬರು ಕೂಡ ಪಿಕ್ಸ್ ಆಗಿದ್ದಾರೆ.. ಇನ್ನೂ ಟೈಟಲ್ ಗೆ ತಕ್ಕಂತೆ ಚಿತ್ರಕಥೆ ಬರೆದು ಶೂಟಿಂಗ್ ಶುರು ಮಾಡುವುದಷ್ಟೆ ಬಾಕಿ ಇರೋದು..

Edited By

Manjula M

Reported By

Manjula M

Comments