ನಿಮ್ಮ ಬಳಿ ರಾಯಲ್ ಎನ್‍ಫೀಲ್ಡ್ ಬುಲೆಟ್ ಇದ್ಯಾ..? ಹಾಗಾದ್ರೆ ಈ ಸುದ್ದಿ ಓದಿ..

09 May 2019 9:31 AM | General
502 Report

ಇತ್ತಿಚಿನ ಹುಡುಗರಿಗೆ ಬೈಕ್ ಕ್ರೇಜ್ ಸಿಕ್ಕಾಪಟ್ಟೆ ಇದೆ.. ಮಾರುಕಟ್ಟೆಗೆ ಯಾವುದೇ ಡಿಸೈನ್ ಹೊಸ ಬೈಕ್ ಬಂದ್ರೆ ಕಣ್ಣು ಮತ್ತು ಮನಸು ಅದರ ಮೇಲೆ ಇರುತ್ತದೆ ಅಷ್ಟು ಕ್ರೇಜ್ ಈಗಿನ ಯುವಕರಿಗೆ ಇರುತ್ತದೆ. ಬೈಕ್ ಅಂದ್ರೂ ಸುಮ್ನೆ ಇರ್ತಾರಾ..? ಅದಕ್ಕೊಂದಿಷ್ಟು ಆಲ್ಟ್ರೇಷನ್ ಅಂತ ಮಾಡಿಸಿ ಒಂದು ರೈಡ್ ಹೊರಟ್ರು ಅಂದ್ರೆ ರೋಡಿನಲ್ಲಿ ಇರೋರೆಲ್ಲಾ ಆ ಗಾಡಿಯನ್ನೆ ನೋಡೋ ತರ ಮಾಡಿ ಬಿಡುತ್ತಾರೆ.. ಆದರೆ ಇದೀಗ ಒಂದು ವೇಳೆ ನಿಮ್ಮ ಬಳಿ ರಾಯಲ್ ಎನ್ ಪೀಲ್ಡ್ ಬುಲೆಟ್ ಇದ್ರೆ ಈ ಸುದ್ದಿಯನ್ನು ಒಮ್ಮೆ ಓದಿ..

ರಾಯಲ್ ಎನ್‍ಫೀಲ್ಡ್ ಬುಲೆಟ್ ಹಾಗೂ ಬುಲೆಟ್ ಎಲೆಕ್ಟ್ರಾ ಮಾದರಿಯ 7 ಸಾವಿರ ಬೈಕ್‍‌ ಗಳಲ್ಲಿ ದೋಷ ಕಾಣಿಸಿಕೊಂಡಿದ್ದು, ಹತ್ತಿರದ ಸರ್ವಿಸ್ ಸ್ಟೇಷನ್‍ ಗಳಲ್ಲಿ ದುರಸ್ತಿಪಡಿಸಿಕೊಳ್ಳುವಂತೆ ಈಗಾಗಲೇ ಕಂಪನಿ ಕರೆ ನೀಡಿದೆ. 2019 ರ ಮಾರ್ಚ್ 20 ಮತ್ತು ಏಪ್ರಿಲ್ 30ರ ಅವಧಿಯಲ್ಲಿ ಉತ್ಪಾದನೆಯಾಗಿರುವ ಈ ಎರಡು ಮಾದರಿಯ ಬೈಕ್‍ ಗಳಲ್ಲಿ ಬ್ರೇಕ್ ಕ್ಯಾಲಿಪರ್ ಬೋಲ್ಟ್ ನಲ್ಲಿ ಸಮಸ್ಯೆ ಇರುವುದರಿಂದಾಗಿ ತಿಳಿದುಬಂದಿದೆ.. ಹಾಗಾಗಿ ಕಂಪನಿಯು ಈ ಕರೆ ನೀಡಲಾಗಿದೆ ಎಂದು ತಿಳಿಸಿದೆ. ವೆಂಡರ್ ಕಂಪನಿ ಪೂರೈಕೆ ಮಾಡಿದ್ದ ಬ್ರೇಕ್ ಕ್ಯಾಲಿಪರ್ ಬೋಲ್ಟ್ ಗಳಲ್ಲಿ ಕೆಲವು ರಾಯಲ್ ಎನ್‍ಫೀಲ್ಡ್ ಗುಣಮಟ್ಟಕ್ಕೆ ಸಮನಾದುದಾಗಿರಲಿಲ್ಲ. ಹೀಗಾಗಿ ಅದನ್ನು ಬದಲಿಸುವ ಅಗತ್ಯವಿದೆ ಎಂಬುದಾಗಿ ಕಂಪನಿ ಹೇಳಿಕೊಂಡಿದೆ. ಸದ್ಯ ಕಂಪನಿ ಬೈಕ್ ಗಳಲ್ಲಿ ದೋಷ ಇದೆ ತಿಳಿಸಿದೆ. ಇದರ ಪ್ರಕಾರ ಯಾರು ಬೈಕ್ ಗಳನ್ನು ಹೊಂದಿದ್ದಾರೋ ಅವರು ಈ ಕೂಡಲೇ ಬೈಕ್ ಅನ್ನು ದುರಸ್ತಿ ಮಾಡಿಕೊಳ್ಳಿ..

 

Edited By

Manjula M

Reported By

Manjula M

Comments