ನೀವು ಗೂಗಲ್ ಪೇ ಬಳಸುತ್ತಿದ್ದೀರಾ..!! ಹಾಗಾದ್ರೆ ನಿಮ್ಮ ಅಕೌಂಟ್ ನಲ್ಲಿ ದುಡ್ಡು ಇದ್ಯಾ ಚೆಕ್ ಮಾಡಿಕೊಳ್ಳಿ..!!!

07 May 2019 9:55 AM | General
2924 Report

ಪ್ರಧಾನಿ ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿದ ಮೇಲೆ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆದವು..ಒಂದು ರೀತಿಯಲ್ಲಿ ಸಾಕಷ್ಟು ವ್ಯವಹಾರಗಳು ಕ್ಯಾಶ್ ಲೆಸ್ ಗಳಿಂದಲೇ ಶುರುವಾದವು.. ಆ ನಡುವೆ ಬಂದಿದ್ದೆ ಗೂಗಲ್ ಪೇ… ಇದೀಗ ಗೂಗಲ್ ಪೇಯನ್ನು ಸಾಕಷ್ಟು ಜನರು ಬಳಸುತ್ತಿದ್ದಾರೆ.. ಹಣವನ್ನು ವರ್ಗಾವಣೆ ಮಾಡುವುದಕ್ಕೆ ಹಾಗೂ ಕರೆನ್ಸಿ ಹಾಕಿಕೊಳ್ಳುವುದಕ್ಕೆ, ಕರೆಂಟ್ ಬಿಲ್ ಕಟ್ಟುವುದಕ್ಕೆ ಈ ರೀತಿಯ ನಾನಾ ಉಪಯೋಗಗಳನನ್ನು ಗೂಗಲ್ ಪೇ ನೀಡುತ್ತಿದೆ.. ಅಷ್ಟೆ ಅಲ್ಲದೆ ಅದರಲ್ಲಿ ಕ್ಯಾಸ್’ಬ್ಯಾಕ್ ಕೂಡ ಸಿಗುತ್ತದೆ.. ಹಾಗಾಗಿ ಜನ ಹೆಚ್ಚಾಗಿ ಗೂಗಲ್ ಪೇಯನ್ನು ಬಳಸುತ್ತಿದ್ದಾರೆ… ಆದರೆ ಇದೀಗ ಗೂಗಲ್ ಪೇ ಬಳಸುವವರು ಈ ಸುದ್ದಿಯನ್ನು ಓದಲೇ ಬೇಕು…

ಗೂಗಲ್ ಪೇ ಖಾತೆಗೆ ಕನ್ನ ಹಾಕಿದ ಕುರಿತು ವಂಚನೆಗೊಳಗಾದ ವ್ಯಕ್ತಿಯೊಬ್ಬರು ಸೈಬರ್ ಕ್ರೈಮ್ ಪೊಲೀಸರಿಗೆ ದೂರನ್ನು ನೀಡಿದ್ದಾರೆ ಎನ್ನಲಾಗುತ್ತಿದೆ...ಡಿಜಿಟಲ್ ಪೇಮೆಂಟ್ ಆಪ್ ಗೂಗಲ್ ಪೇ ಬಳಕೆದಾರ ಮಹಾವೀರ್ ಅವರನ್ನು ವಂಚಿಸಲಾಗಿದ್ದು, ಅವರ ಖಾತೆಯಲ್ಲಿದ್ದ 27,262 ರೂ. ದೋಚಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ... ಮತ್ತೀಕೆರೆಯಲ್ಲಿ ಆಟೋಮೊಬೈಲ್ ಮಳಿಗೆ ಹೊಂದಿರುವ ಮಹಾವೀರ್ ಅಂಗಡಿಗೆ ಬಂದಿದ್ದ ಗ್ರಾಹಕರೊಬ್ಬರು ವಸ್ತುವೊಂದನ್ನು ಖರೀದಿ ಮಾಡಿದ್ದು, ಅವರ ಅಮೆಜಾನ್ ಖಾತೆಗೆ 6000 ರೂ. ಪಾವತಿ ಮಾಡಿದ್ದಾರೆ. ಆದರೆ, ಮಹಾವೀರ್ ಅವರ ಖಾತೆಯಲ್ಲಿ ಹಣ ಜಮಾ ಆದ ಬಗ್ಗೆ ಯಾವುದೇ ರೀತಿಯಾದ ಮಾಹಿತಿ ಬಂದಿಲ್ಲ. 3-4 ದಿನದ ನಂತರ ಅಮೆಜಾನ್ ಕಸ್ಟಮರ್ ಕೇರ್ ಸಂಖ್ಯೆಯನ್ನು ಗೂಗಲ್ ನಲ್ಲಿ ಪಡೆದುಕೊಂಡ ಅವರು ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಆದರೆ ಅಮೆಜಾನ್ ಕಸ್ಟಮರ್  ಕೇರ್ ಅನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಕೊನೆಗೆ ಮಲ್ಲೇಶ್ವರಂ ಕಚೇರಿ ಹೆಸರಿನಲ್ಲಿ ದೊರೆತ ನಂಬರ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಅಮೆಜಾನ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ಗೂಗಲ್ ಪೇ ಖಾತೆಯ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡಿದ್ದಾನೆ. ಅವರ ಬ್ಯಾಂಕ್ ಖಾತೆಯಲ್ಲಿದ್ದ 27,262 ರೂ. ಹಣ ದೋಚಿದ್ದಾನೆ. ಮಹಾವೀರ್ ಅವರ ಅಕೌಂಟ್ ಹ್ಯಾಕ್ ಮಾಡಿ ಖದೀಮರು ಹಣ ದೋಚಿದ್ದು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.ಒಟ್ಟಾರೆಯಾಗಿ ಗೂಗಲ್ ಬಳಕೆದಾರರು ಸ್ವಲ್ಪ ಎಚ್ಚೆತ್ತುಕೊಂಡಿರಬೇಕು.. ಯಾರೋ ಬ್ಯಾಂಕ್ ಮಾಹಿತಿ, ಅಥವಾ ನಿಮ್ಮ ಅಕೌಂಟ್ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದಾಕ್ಷಣ ಕೊಟ್ಟುಬಿಡಬೇಡಿ.. ಆಮೇಲೆ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಕೂಡ ಝೀರೋ ಆಗಬಹುದು.. ಒಂದು ವೇಳೆ ಈ ರೀತಿಯ ಕರೆ ಬಂದರೆ ತಕ್ಷಣವೇ ಹತ್ತಿರದ ಸೈಬರ್ ಕ್ರೈಂ ಗೆ ಮಾಹಿತಿಯನ್ನು ನೀಡಿ..

 

Edited By

Manjula M

Reported By

Manjula M

Comments