ಒಂದೇ ಒಂದು ಲಿಪ್’ಲಾಕ್’ನಿಂದಾಗಿ ಏನಾಯಿತು ಗೊತ್ತಾ..?

02 May 2019 10:22 AM | General
734 Report

ಇಡೀ ಒಂದು ನಾಟಕ ಲಿಪ್ ಲಾಕ್ ಇಂದ ಹಾಳಾಯಿತು ಅಂದರೆ ನೀವು ನಂಬಲೇ ಬೇಕು..ನಾಟಕ ಮಾಡಿ ಅಂದ್ರೆ ಸ್ಟೇಜ್  ಮೇಲೆ ಲಿಪ್ ಮಾಡಿ ಇಡೀ ನಾಟಕವನ್ನೆ ಹಾಳು ಮಾಡಿದ್ದಾರೆ.. ವಿಷಯ ಏನು ಅಂದ್ರೆ ಆ ನಾಟಕದಲ್ಲಿ ಲಿಪ್ ಲಾಕ್ ದೃಶ್ಯವೇ ಇರಲಿಲ್ಲವಂತೆ.. ಆದರೂ ಅವರಿಬ್ಬರು ವೇದಿಕೆ ಮೇಲೆಯೇ ಲಿಪ್ ಲಾಕ್ ಮಾಡಿ ಬಂದಿದ್ದ ಪ್ರೇಕ್ಷಕರು ಬಾಯಿ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡಿದ್ದಾರೆ..

ಸದ್ಯ ನಾಟಕದಲ್ಲಿ ಲಿಪ್ ಲಾಕ್ ಮಾಡುವ ದೃಶ್ಯ ಇರಲೇ ಇಲ್ಲ. ಆದರೆ ಈ ಜೋಡಿಗೆ ಏನಾಯಿತೋ ಗೊತ್ತಿಲ್ಲ.  ವೇದಿಕೆ ಮೇಲೆ ಎಲ್ಲರೂ ನೊಡುವಂತೆಯೇ  ಲಿಪ್ ಲಾಕ್ ಮಾಡಿಕೊಂಡಿದ್ದಾರೆ...ಇಷ್ಟು ಆದ ಮೇಲೆ ನಾಟಕ ಸರಿಯಾಗಿ ನಡೆಯುತ್ತದೆಯ..ಖಂಡಿತಾ ಇಲ್ಲ…  ನಾಟಕ ಹಾದಿ ತಪ್ಪಿ ಹೋಯಿತು. ಭೋಪಾಲ್ ನ ರವೀಂದ್ರ ರಂಗಮಂದಿರದಲ್ಲಿ ರೋಮಿಯೋ-ಜೂಲಿಯಟ್ ನಾಟಕ ನಡಿಯುತ್ತಿತ್ತು. ನಾಟಕ ನಡೆಯುವ ವೇಳೆ ಲಿಪ್ ಲಾಕ್ ಆಗಿ ಮಾಡಿಕೊಂಡು ಬಿಟ್ಟಿದ್ದಾರೆ.. ಈ ನಾಟಕದಲ್ಲಿ ನಿಶಾಂತ್ ರಘವಂಶಿ ರೋಮಿಯೋ ಪಾತ್ರವನ್ನು ಹಾಗೂ ಮೃಣಾಲಿ ಪಾಂಡೆ ಜೂಲಿಯಟ್ ಪಾತ್ರ ಮಾಡುತ್ತಿದ್ದರು… ಜೂಲಿಯೆಟ್ ವಿಷ ಸೇವಿಸಿ ಸಾಯುವ ನಾಟಕ ಮಾಡುತ್ತಾಳೆ.. ಈ ಸಮಯದಲ್ಲಿ ರೋಮಿಯೋ ಪಾತ್ರಧಾರಿ ನಿಶಾಂತ್ ರಘವಂಶಿ ವೇದಿಕೆ ಮೇಲೆಯೇ ಜೂಲಿಯಟ್ ಪಾತ್ರಧಾರಿ ಮೃಣಾಲಿ ಪಾಂಡೆಗೆ ಕಿಸ್ ಮಾಡಿ ಬಿಟ್ಟಿದ್ದಾನೆ. ಇತ್ತ ವಿಷ ಕುಡಿದು ಸಾಯುವಂತೆ ನಟಿಸಿದ್ದ ಜೂಲಿಯಟ್ ಕೂಡ ಎದ್ದು ಆಕೆಯೂ ನಿಶಾಂತ್ ರಘವಂಶಿಗೆ ಲಿಪ್‍ಲಾಕ್ ಕಿಸ್ ಮಾಡಿದ್ದಾಳೆ. ಈ ಎಲ್ಲ ಅವಘಡ ನಡೆಯುತ್ತಿದ್ದಂತೆ ನಾಟಕ ನೋಡಲು ಬಂದಿದ್ದ ಪ್ರೇಕ್ಷಕರು ಗಲಾಟೆ ಪ್ರಾರಂಭ ಮಾಡಿದ್ದಾರೆ.. ಒಂದು ಲಿಪ್ ಲಾಕ್ ಇಡೀ ನಾಟಕವನ್ನೆ ಹಾಳುಮಾಡಿದ್ದಂತೂ ಸುಳ್ಳಲ್ಲ…

Edited By

Manjula M

Reported By

Manjula M

Comments