ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ಯಾವಾಗ ಗೊತ್ತಾ..?

01 May 2019 10:18 AM | General
425 Report

ನೆನ್ನೆಯಷ್ಟೆ ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಿದೆ.. 625 ಕ್ಕೆ 625 ತೆಗೆದುಕೊಂಡು ಕೆಲವರು ಖುಷಿಯಲ್ಲಿದ್ದರೆ ಮತ್ತೆ ಕೆಲವರು ಫೇಲ್ ಮಾಡಿಕೊಂಡು ಬೇಜಾರಿನಲ್ಲಿ ಇದ್ದಾರೆ.. ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹಾಸನ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಶಿಕ್ಷಣದ ಮುಖ್ಯ ಹಂತಗಳಲ್ಲಿ ಎಸ್ ಎಸ್ ಎಲ್ ಸಿ ಕೂಡ ಒಂದು… ಹಾಗಾಗಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ದಿನಾಂಕವನ್ನು ನಿಗಧಿ ಮಾಡಿದೆ.

ಮಾರ್ಚ್-ಏಪ್ರಿಲ್ 2019ರ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 21 ರಿಂದ 28 ರ ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಮೇ. 2 ರಿಂದ 13 ರ ವರೆಗೆ ಪಡೆಯಬಹುದಾಗಿದೆ. ಮರುಮೌಲ್ಯಮಾಪನಕ್ಕೆ ಮೇ. 6 ರಿಂದ 17 ರ ವರೆಗೆ ಅರ್ಜಿ ಸಲ್ಲಿಸಬಹುದು. ಛಾಯಾಪ್ರತಿ ಒಂದು ವಿಷಯಕ್ಕೆ 405 ರೂಪಾಯಿ. ಮರುಮೌಲ್ಯಮಾಪನಕ್ಕೆ ಒಂದು ವಿಷಯಕ್ಕೆ 805 ರೂಪಾಯಿ ಶುಲ್ಕ ವಿಧಿಸಲಾಗಿದೆ. ಜೂನ್ ನಲ್ಲಿ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ನಡೆಸಿಕೊಳ್ಳಬಹುದಾಗಿದೆ.

Edited By

Manjula M

Reported By

Manjula M

Comments