ಮತ ಚಲಾಯಿಸಿ ನಾನು ಯಾರ ವಿರೋಧಿ ಎಂದು ಹೇಳಿದ ಕಾಂಟ್ರೊವರ್ಸಿ ಕ್ವೀನ್...!!!

30 Apr 2019 10:29 AM | General
400 Report

 ಬಾಲಿವುಡ್’ನ ಬ್ಯೂಟಿ ಕ್ವೀನ್ ಕಂಗನಾ ಹಿಟ್ ಸಿನಿಮಾಗಳನ್ನು ಕೊಡುವುದರ ಜೊತೆಗೆ ಸಾಕಷ್ಟು ವಿವಾದಕ್ಕೂ ಹೆಸರಾದವರು. ಕಂಗನಾ  ಅವರ 'ಕ್ವೀನ್ 'ಸಿನಿಮಾ ಸೂಪರ್ ಹಿಟ್ ಆಯ್ತು… ಬಾಲಿವುಡ್ ನ ಬಹು ಬೇಡಿಕೆ ನಟಿ ಕಂಗನಾ ರನಾವತ್ ತಮ್ಮ ಬಿಚ್ಚು ನುಡಿಗಳಿಂದಲೇ ಖ್ಯಾತರಾದವರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಕಂಗನಾ ಇದೀಗ ತಾವು ಓಟ್ ಹಾಕಿದ ನಂತರ ನಾನು ಯಾರ ಪರ ಮತ್ತು ಯಾರ ವಿರೋಧಿ ಎಂಬುದನ್ನು ಹೇಳಿದ್ದಾರೆ.

Image result for sonia gandhi with kangana

ನಿನ್ನೆ ಬಾಲಿವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ತಮ್ಮ ಹಕ್ಕು ಚಲಾವಣೆ ಮೂಲಕ ದೇಶದ ಜನತೆಗೆ ಮಾದರಿಯಾಗಿದ್ದಾರೆ. ನಿನ್ನೆ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಮಾತನಾಡಿದ ಕಂಗನಾ ಅವರು ನಾವು ಹಿಂದೆ ಇಟಲಿ ಸರ್ಕಾರದ ಸೇವಕರಾಗಿದ್ದೆವು. ಅಬ್ಬಾ ಇವತ್ತು ನಾವು ಸ್ವತಂತ್ರರಾಗಿದ್ದೇವೆ ಎಂದಿದ್ದಾರೆ.'ನಿಜ ಹೇಳಬೇಕೆಂದರೆ ಭಾರತ ಇತ್ತೀಚೆಗಷ್ಟೇ ಸ್ವಂತತ್ರವಾಗಿದೆ. ಇದಕ್ಕೆ ಮೊದಲು ಮುಘಲರು, ಬ್ರಿಟಿಷ್, ಇಟೆಲಿ ಸರ್ಕಾರದ ದಾಸ್ಯದಲ್ಲಿತ್ತು. ಈಗ ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿದೆ' ಎಂದಿದ್ದಾರೆ. ಆ ಮೂಲಕ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿಯವರ ಇಟೆಲಿ ಮೂಲವನ್ನು ಕೆದಕಿ ಟಾಂಗ್ ಕೊಟ್ಟಿದ್ದಾರೆ. ಕಂಗನಾ ತಮ್ಮ ಮತ ಚಲಾವಣೆ ಬಳಿಕ ತಾನು ಯಾರ ಪರ ಮತ್ತು ಯಾರ ವಿರೋಧವೆಂದು ಪರೋಕ್ಷವಾಗಿ ತಿಳಿಸಿದ್ದಾರೆ.  ಬಾಲಿವುಡ್ ನ ಸಾಕಷ್ಟು ಕಲಾವಿದರ ಬಿಜೆಪಿ ಮೋದಿಯ ಪರವಾಗಿ  ಪರೋಕ್ಷವಾಗಿ ಅಭಿಯಾನ ಆರಂಭಿಸಿದ್ದರು. ಇದೀಗ  ಸಾಲಿಗೆ ಕಂಗನಾ ಕೂಡ ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮುಮದಿನ ಸರ್ಕಾರ ಬಿಜೆಪಿಯದ್ದೇ ಆಗಿದೆ, ಪ್ರಧಾನಿ ಮತ್ತೊಮ್ಮೆ ಮೋದಿಯೇ ಆಗಲಿದ್ದಾರೆಂಬ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ ಈ ಕಾಂಟ್ರೋವರ್ಸಿ ಕ್ವೀನ್ ಕಂಗನಾ.

Edited By

Kavya shree

Reported By

Kavya shree

Comments