ಇನ್ನು ಮುಂದೆ ಮುಖ ಮುಚ್ಚಿಕೊಂಡು ಓಡಾಡುವಂತಿಲ್ಲ : ಹೊಸ ಕಾನೂನು ಜಾರಿ...!!!

29 Apr 2019 12:34 PM | General
291 Report

ಅಂದಹಾಗೇ ಬಿಸಿಲು, ಧೂಳೀಗೆ ಚರ್ಮವನ್ನು ರಕ್ಷಣೆ ಮಾಡಿಕೊಳ್ಳಲು ಹುಡುಗಿಯರು ಮುಸುಕು ಹಾಕಿಕೊಂಡು ಓಡಾಡೋದು ಇತ್ತೀಚಿಗಂತೂ ಕಾಮನ್. ಆದರೆ ಇದೀಗ ಅಂತಹವರಿಗೆ ಶಾಕ್’ವೊಂದು ಕಾದಿದೆ. ಅಂದಹಾಗೇ ಹುಡುಗಿಯರು ಮತ್ತು ಹುಡುಗರಾದಿಯಾಗಿ ಯಾರು ಮುಸುಕು ಹಾಕಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಒಡಾಡಬಾರದೆಂದು ಕಾನೂನು ತರಲಾಗುತ್ತದೆ.

ಅಂದಹಾಗೇ ಇದು ಶ್ರೀಲಂಕಾದಲ್ಲಿ ಜಾರಿಗೆ ತರುತ್ತಿರುವ ಕಾನೂನು. ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದ ಬೆನ್ನಲ್ಲೇ ಮುಸುಕು ಧರಿಸುವುದನ್ನು ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಉಗ್ದರ ಪೈಶಾಚಿಕ ಕೃತ್ಯದಲ್ಲಿ 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 500 ಜನರು ಗಾಯಗೊಂಡಿದ್ದರು. ಇದರಿಂದ ತ್ಲಲಣಿಸಿದ್ದ ಶ್ರೀಲಂಕಾ ಇನ್ನೂ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಅಂದಹಾಗೇ ಮುಸುಕು ಧಾರಿಗಳ ಸೋಗಿನಲ್ಲಿ ಉಗ್ರರು ಬರಬಹುದು  ಎಂಬ ಮುಂಜಾಗ್ರತ ಕ್ರಮದಿಂದ ಮೊದಲೇ ಈ ಕಾನೂನು ಜಾರಿಗೆ ತರುವಲ್ಲಿ ಚರ್ಚಿಸಲಾಗುತ್ತಿದೆ. ಈ ಮಧ್ಯೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಈ ಆದೇಶ ನೀಡಿದ್ದಾರೆ. ಇಂದಿನಿಂದ ಈ ಆದೇಶ ಜಾರಿಯಾಗಿದೆ.ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ, ವ್ಯಕ್ತಿಯ ಗುರುತು ಮರೆಮಾಚುವಂತೆ ಯಾವುದೇ ರೀತಿಯ ಬಟ್ಟೆಯನ್ನು ಮುಖಕ್ಕೆ ಧರಿಸುವುದು ಬ್ಯಾನ್ ಮಾಡಲಾಗಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿದೆ. ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಮುಸುಕು ಧರಿಸಬಾರದು ಎಂದು ಹೇಳಿದೆ.

Edited By

Kavya shree

Reported By

Kavya shree

Comments