ಇಂದು ನಾಮಪತ್ರ ಸಲ್ಲಿಸಿದ ನರೇಂದ್ರ ಮೋದಿಯ ಹಿಂದೆ ಇತ್ತು ಜನಸಾಗರ....

26 Apr 2019 12:57 PM | General
321 Report

ಇಂದು ಮೋದಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ  ಕ್ಷೇತ್ರದಿಂದ  ಎರಡನೇ ಬಾರಿ ಲೋಕಸಭೆಗೆ ಆಯ್ಕೆ ಬಯಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ವಾರಣಾಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಮಪತ್ರ ಸಲ್ಲಿಸಿದ ಅವರ ಹಿಂದೆ ಲಕ್ಷಾಂತರ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಇದ್ದರು. ಸ್ವ ಇಚ್ಛೆಯಿಂದಲೇ ಅವರೆಲ್ಲಾ ಮೋದಿ ಭಾವ ಚಿತ್ರ ಹಿಡಿದು, ಮೋದಿ ಮೋದಿ ಘೋಷಣೆ ಕೂಗುತ್ತಾ ಅವರ ಹಿಂದೆ ಸಾಗರದಂತೇ ಹೋಗುತ್ತಿದ್ದರು.

ಇನ್ನು ಇಡೀ ವಾರಣಾಸಿ ತುಂಬೆಲ್ಲಾ ಜನವೋ ಜನ, ಎಲ್ಲವೂ ಕೇಸರಿ ಮಯವಾಗಿತ್ತು. ಮತ್ತೊಮ್ಮೆ ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡ ಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ ಕೋಟ್ಯಾಂತರ ಮಂದಿ. ಅಷ್ಟಕ್ಕೂ ನಾಮಪತ್ರ ಸಲ್ಲಿಸುವುದಕ್ಕೂ ಮುಂಚೆಯೇ ವಾರಣಾಸಿಗರನ್ನು ಕುರಿತು ಭಾಷಣ ಮಾಡಿದ ಮೋದಿ, ನನ್ನದೊಂದು ಆಸೆಯಿದೆ. ನೀವೆಲ್ಲಾ ಈಡೇರಿಸುತ್ತೀರಾ. ಲೋಕಸಭೆ ಚುನಾವಣೆಯನ್ನು ಗೆಲ್ಲಲು ಬೇಕಾಗಿರುವುದು ಜನರೇ ಹೊರತು ಹಣವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲೋಕಸಭೆ ಚುನಾವಣೆ ಈ ಬಾರಿಪುರುಷರಿಗಿಂತ ಶೇ.5 ರಷ್ಟು ಹೆಚ್ಚಿನ ಮಹಿಳೆಯರು ಮತದಾನ ಮಾಡಬೇಕು ಇದು ನನ್ನ ಆಸೆ ಈ ಆಸೆಯನ್ನು ಈಡೇರಿಸುತ್ತೀರಾ ಎಂದು ಮೋದಿ ಕೇಳಿದ್ದಾರೆ. ಚುನಾವಣೆಯನ್ನು ಗೆಲ್ಲಲು ಬೇಕಾಗಿರುವುದು ಜನರೇ ಹೊರತು ಹಣವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಬಿಜೆಪಿ ಅಧ್ಯಕ್ಷ ಅಮಿತ್ ಶಾ , ಕೇಂದ್ರ ಸಚಿವರುಗಳು ಮತ್ತು ಬಿಜೆಪಿ ನಾಯಕರು ಈ ವೇಳೆ ಮೋದಿಗೆ ಸಾಥ್ ನೀಡಿದರು. ಅನ್ನಪೂರ್ಣ ಎಂಬವರು ಮೋದಿ ನಾಮಪತ್ರಕ್ಕೆ ಸೂಚಕರಾಗಿದ್ದಾರೆ.

Edited By

Kavya shree

Reported By

Kavya shree

Comments