ನಿಖಿಲ್ ಸೋಲಿಗೆ ಸಿಕ್ತ ಮುನ್ಸೂಚನೆ..!! ಭವಿಷ್ಯದ ಪ್ರಕಾರ ನಿಖಿಲ್ ಸೋಲ್ತಾರ…!!!

25 Apr 2019 4:19 PM | General
10318 Report

ಹಲವು ತಿಂಗಳುಗಳಿಂದ ಕಾಯುತ್ತಿದ್ದ ಲೋಕಸಮರಕ್ಕೆ ಮೊನ್ನೆ ಮೊನ್ನೆಯಷ್ಟೆ ತೆರೆ ಬಿದ್ದಿದೆ.. ಇನ್ನೂ ಫಲಿತಾಂಶವಷ್ಟೆ ಬಾಕಿಯಿರುವುದು… ಮೇ 23 ರ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ.. ಲೋಕಸಮರವೇನೋ ಮುಕ್ತಾವಾಯಿತು.. ಲೋಕಸಮರದಲ್ಲಿ ಹೈವೋಲ್ಟೇಜ್ ಅಖಾಡವಾಗಿದ್ದು ಮಂಡ್ಯ.. ಸುಮಲತಾ ಹಾಗೂ ನಿಖಿಲ್ ಮಧ್ಯೆ ಪ್ರತಿಷ್ಟೆಯ ಪೈಪೋಟಿ ಏರ್ಪಟ್ಟಿತ್ತು.. ಈಗಾಗಲೇ ಅಭ್ಯರ್ಥಿಗಳು ಹಲವು ರೀತಿಯ ಭವಿಷ್ಯ, ಜ್ಯೋತಿಷ್ಯದ ಮೊರೆ ಹೋಗಿದ್ದಾರೆ.

ಅದೇ ರೀತಿ ಮಂಡ್ಯದ ದೋಸ್ತಿ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಚುನಾವಣಾ ಭವಿಷ್ಯದ ಬಗ್ಗೆ ಮದ್ದೂರವ್ವ ಭವಿಷ್ಯ ಹೇಳಿದಳಾ?. ಈ ಭವಿಷ್ಯದ ಪ್ರಕಾರ ನಿಖಿಲ್ ಸೋಲುತ್ತಾರಾ ಎನ್ನುವ ಚರ್ಚೆ ಇದೀಗ ಎಲ್ಲ ಕಡೆಗಳಲ್ಲಿಯೂ ಕೇಳಿ ಬರುತ್ತಿದೆ. ನಿಖಿಲ್ ಗೆಲುವಿಗಾಗಿ ದೇವೇಗೌಡರ ಪುತ್ರ ಡಾ. ರಮೇಶ್ ಅವರ ಪತ್ನಿ ಸೌಮ್ಯಾ ರಮೇಶ್ ಮದ್ದೂರವ್ವ ದೇವರಿಗೆ ಹರಕೆ ಹೊತ್ತಿದ್ದರು. ಆಡನ್ನು ತೆಗೆದುಕೊಂಡು ಹರಕೆ ತೀರಿಸಲು ಮದ್ದೂರವ್ವ ದೇವಾಲಯದ ಬಳಿ ತೆರಳಿದಾಗ ಆಡು ತಲೆ ಆಡಿಸಲು ಹಿಂದೇಟು ಹಾಕಿದೆ. ಸೌಮ್ಯಾ ರಮೇಶ್ ಅವರು ಗಂಟೆ ಗಟ್ಟಲೇ ಸ್ಥಳದಲ್ಲಿ ಕಾದರೂ ಕೂಡ ಆಡು ತಲೆ ಆಡಿಸದೇ ಆಡು ಆಗೆಯೇ ನಿಂತಿದೆ. ಇದರಿಂದ ಎಲ್ಲರೂ ಕೂಡ ಆತಂಕಕೊಂಡಿದ್ದಾರೆ. ಮತ್ತೊಂದು ಆಡು ತೆಗೆದುಕೊಂಡು ದೇವಾಲಯಕ್ಕೆ ಆಗಮಿಸುವುದಾಗಿ ಹೇಳಿ ಮನೆಗೆ ವಾಪಸಾಗಿದ್ದಾರೆ.ಆಡು ತಲೆ ಆಡಿಸದೆ ಇದ್ದಿದ್ದಕ್ಕೆ ನಿಖಿಲ್ ಸೋಲುತ್ತಾರ ಮಾತು ಕುಟುಂಬದಲ್ಲಿಯೇ ಶುರುವಾಗಿದೆ. ಒಟ್ಟಿನಲ್ಲಿ ಭವಿಷ್ಯ ನಿಜವಾಗುತ್ತೋ ಗೊತ್ತಿಲ್ಲ,,, ಆದರೆ ಮಂಡ್ಯದ ಜನತೆ ಮಾತ್ರ ಯಾರ ಕಡೆ ಒಲವು ತೋರಿಸಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,

Edited By

Manjula M

Reported By

Manjula M

Comments