ಬೀದಿಗೆ ಬಂತು ಅತ್ತೆ-ಸೊಸೆ ಜಗಳ..!! ಹುತಾತ್ಮ ಯೋಧ ಗುರು ಮನೆಯಲ್ಲಿ ಮುಂದುವರೆದ ಕಲಹ…

24 Apr 2019 11:56 AM | General
279 Report

ಫೆಬ್ರವರಿ 14.. ಫುಲ್ವಾಮ ದಾಳಿಯಾದ ದಿನ… ಆ ದಿನವನ್ನು ಯಾರು ಕೂಡ ಮರೆಯಲ್ಲೂ ಸಾಧ್ಯವಿಲ್ಲ… ಪುಲ್ವಾಮ ದಾಳಿಯ ನೆನಪು ಮರೆಯಲು ಯಾರಿಂದಲೂ ಕೂಡ ಸಾಧ್ಯವಿಲ್ಲ…ಅದರಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಗುಡಿಗೆರೆ ಗ್ರಾಮದ ಯೋಧ ಗುರು ಕೂಡ ಒಬ್ಬರು.. ಯೋಧ ಗುರು ಮನೆಯಲ್ಲಿ ಇದೀಗ ಅತ್ತೆ ಸೊಸೆ ಜಗಳ ಪ್ರಾರಂಭವಾಗಿದೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹಣಕ್ಕಾಗಿ ಅತ್ತೆ ಸೊಸೆಯರಿಬ್ಬರು ಜಗಳವಾಡಿದ್ದು, ಈಗ ಗುರು ಅವರ ಪತ್ನಿ ಕಲಾವತಿ ಅವರು ತಮ್ಮ ತವರು ಮನೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರುವಿನ ಕುಟುಂಬಕ್ಕೆ ರಾಜ್ಯ ಸರ್ಕಾರ ಸೇರಿದಂತೆ ಲಕ್ಷಾಂತರ ಜನರು ಹಣ ಸಹಾಯವನ್ನು ಮಾಡಿದ್ದರು. ಇದೀಗ ಅದೇ ಹಣದ ವಿಷಯಕ್ಕಾಗಿ ಜಗಳವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಪರಿಹಾರ ರೂಪದಲ್ಲಿ ಬಂದ ಚೆಕ್​ಗಳು ಕಲಾವತಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯವಾದರೆ, ನಗದು ರೂಪದಲ್ಲಿ ಬಂದ ಪರಿಹಾರದ ಹಣ ಗುರು ತಾಯಿ ಚಿಕ್ಕೋಳಮ್ಮ ಅವರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ ಕೂಡ ಅತ್ತೆ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಹಣಕ್ಕಾಗಿ ಸಾಕಷ್ಟು ಜಗಳಗಳು ನಡೆದಿದ್ದವು.. ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಂತೂ ಸುಳ್ಳಲ್ಲ… ಈ ಬಗ್ಗೆ ಮಾಧ್ಯಮಗಳು ಕೂಡ ವರದಿ ಪ್ರಸಾರ ಮಾಡಿದ್ದವು.  ದಿನ ಕಳೆದಂತೆ ಇಬ್ಬರಲ್ಲೂ ದ್ವೇಷ ಮಂಗಳವಾರ ಹೆಚ್ಚಾಗಿ ಗಲಾಟೆ ನಡೆದಿದೆ. ಗಲಾಟೆ ಬಿಡಿಸಲು ಗುರು ಸಹೋದರ ಮಧು ಪ್ರಯತ್ನ ಮಾಡಿದ್ದಾರೆ. ಆದರೆ ಈ ವೇಳೆ ಸಾಸಲಪುರದಿಂದ ಆಗಮಿಸಿದ ಕಲಾವತಿ ಪೋಷಕರು ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.. ಕೆಲವೊಮ್ಮೆ ದುಡ್ಡಿನ ಮುಂದೆ ಸಂಬಂಧಗಳು ಲೆಕ್ಕಕ್ಕೆ ಬರುವುದಿಲ್ಲ… ಅದೇ ರೀತಿ ಯೋಧ ಗುರುವಿನ ಮನೆಯಲ್ಲೂ ಆಗಿದೆ.. ಹೀಗೆ ಮಾಡುವುದರಿಂದ ಯೋಧರ ಕುಟುಂಬಗಳ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

Edited By

Manjula M

Reported By

Manjula M

Comments