ತಂಗಿ ಬಾಯ್'ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾನಿಯಾ ಮಿರ್ಜಾ..!!!

24 Apr 2019 11:18 AM | General
196 Report

ಅಂದಹಾಗೇ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸದ್ಯ ಸಿಕ್ಕಾಪಟ್ಟೆ ಕಾಂಟ್ರೊವರ್ಸಿಗೆ ಒಳಗಾಗಿದ್ದರು. ಪಾಕಿಸ್ತಾನದ ಸೈನಿಕರು ಭಾರತೀಯ ಸೈನಿಕರ ಮೇಲೆ ಯುದ್ಧ ಮಾಡಿದಾಗ  ಸಾನಿಯಾ ಮಿರ್ಜಾ ಮತ್ತು ಅವರ ಪತಿ ಮೇಲೆ ಸಾಕಷ್ಟು ಭಾರತೀಯರು ಟ್ರೋಲ್ ಮಾಡಿದ್ದರು. ಸಿನಿಮಾ, ಕ್ರೀಡೆ ಆಟಗಾರರು ಸೇರಿದಂತೇ ಅನೇಕರು ಸಾನಿಯಾ ಮಿರ್ಜಾ ಮೇಲೆ  ಟೀಕಾರೋಪ ಮಾಡಿದ್ದರು. ಸದ್ಯ ಇದೀಗ ಸಾನಿಯಾ  ಮತ್ತೆ ಸುದ್ದಿಯಾಗಿದ್ದಾರೆ. ಐಪಿಎಲ್ ಪಂದ್ಯ ವೀಕ್ಷಿಸಲು ಬಂದ  ಅವರು ವ್ಯಕ್ತಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದಾರೆ.

ಹೈದ್ರಬಾದ್​ ನಿವಾಸಿಯಾಗಿರೋ ಸಾನಿಯಾ,ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಆದ್ರೂ ಮಗನ ನೋಡಿಕೊಳ್ಳುವ ಜವಬ್ದಾರಿ ಮನೆಯವರಿಗೆ ಒಪ್ಪಿಸಿ, ಸನ್​ರೈಸರ್ಸ್ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕೂತು ಪ್ರೋತ್ಸಾಹಿಸುತ್ತಿದ್ದಾರೆ.ಮೊನ್ನೆ ಕೆಕೆಆರ್​ ವಿರುದ್ಧದ ಪಂದ್ಯ ಇದ್ದಾಗಲೂ ಸಾನಿಯಾ ಹಾಜರಾಗಿದ್ರು.ವಿಶೇಷ ಅಂದ್ರೆ, ಸಾನಿಯಾ ಜೊತೆ ಅವರ ತಂಗಿ ಅನಮ್​ ಮಿರ್ಜಾ ಹಾಗು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಮಗ ಅಜದ್​ ಜತೆ ಕಾಣಸಿಕೊಂಡಿದ್ದಾರೆ. ಅನಮ್​ ಮಿರ್ಜಾ ಹಾಗು ಅಜದ್​ ದೀರ್ಘಕಾಲದ ಸ್ನೇಹಿತರಾಗಿದ್ದಾರೆ.ಆದ್ರೆ ಮೂಲಗಳ ಪ್ರಕಾರ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗ್ತಿದೆ. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರು ಸಮ್ಮತಿ ಸೂಚಿಸಿದ್ದಾರೆ.

Edited By

Kavya shree

Reported By

Kavya shree

Comments