ರಾಹುಲ್ ಗಾಂಧಿಗೆ ಸುಪ್ರೀಂ’ನಿಂದ ನೋಟಿಸ್ ಜಾರಿ…

23 Apr 2019 3:14 PM | General
238 Report

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೇ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ  ತಪ್ಪಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನ್ಯಾಯಾಂಗ ನಿಂಧನೆ ನೋಟೀಸ್  ಜಾರಿ ಮಾಡಿದೆ. ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ಮೀನಾಕ್ಷಿ ಲೇಖಿ  ಸಲ್ಲಿಸಿರುವ ನ್ಯಾಯಾಂಗ ನಿಂಧನೆ ಅರ್ಜಿ ಹಾಗೂ ರಫೇಲ್ ಜೆಟ್ ಒಪ್ಪಂದದ ಬಗ್ಗೆ 2018ರ ಡಿ.14 ರಂದು ನೀಡಲಾಗಿರುವ ತೀರ್ಪಿನ ಪುನರ್‌ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಎ.30ಕ್ಕೆ ನಡೆಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಲೇಖಿ ತನ್ನ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ  ನಿಂಧನೆ ಅರ್ಜಿಯನ್ನು ರದ್ದುಗೊಳಿಸಬೇಕೆಂಬ ರಾಹುಲ್ ಗಾಂಧಿಯ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾಯಾಂಗ ನಿಂಧನೆ  ಅರ್ಜಿಗೆ ಸಂಬಂಧಿಸಿದಂತೇ  ಲೇಖಿ ತನ್ನ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ರದ್ದುಗೊಳಿಸಬೇಕೆಂಬ ರಾಹುಲ್ ಗಾಂಧಿಯ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.ರಾಹುಲ್ ಗಾಂಧಿ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದವನ್ನು ಆಲಿಸಿದ ಬಳಿಕ ಪ್ರತಿವಾದಿ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡುವುದು ಸೂಕ್ತ ಎಂದು ಪರಿಗಣಿಸಿದ್ದೇವೆ'' ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ತಿಳಿಸಿದೆ.

Edited By

Kavya shree

Reported By

Kavya shree

Comments