ಅಪ್ಪ ನನ್ನ ಒಳ ಉಡುಪಿನ ಬಗ್ಗೆ ನೀಚವಾಗಿ ಮಾತನಾಡಿದ್ರು, ಈಗ ಮಗನ ಸರದಿ : ಜಯಪ್ರದಾ ಬೇಸರ

23 Apr 2019 11:24 AM | General
1274 Report

ರಾಜಕೀಯ ಭಾಷಣ ಮಾಡವ ಭರದಲ್ಲಿ ಕೆಲ ರಾಜಕೀಯ ನಾಯಕರು ನಾಲಿಗೆ ಹರಿಬಿಟ್ಟು ವಿವಾದಕ್ಕೆ ಒಳಗಾಗೊದು ಕಾಮನ್… ಮಂಡ್ಯ ಕ್ಷೇತ್ರದಲ್ಲಿ ಪರಸ್ಪರರು ಮಾತಿನ ಕೆಸರೆರಚಾಟದಲ್ಲಿದ್ದಾರೆ.ಕೇಂದ್ರದಲ್ಲಿಯೂ ಕೂಡ ಇದರ ಹೊರತಾಗೇನು ಇಲ್ಲ. ನಟಿ ಜಯಪ್ರದಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜಂ ಖಾನ್ ಜಯಪ್ರದಾ ಅವರ ಒಳ ಉಡುಪಿನ ಬಗ್ಗೆ ಮಾತನಾಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದರು… ಇದೀಗ ಅವರ ಮಗ ವಿವಾದ ಸೃಷ್ಟಿಸಿದ್ದಾರೆ.

ರಾಂಪುರ ಬಿಜೆಪಿ ಅಭ್ಯರ್ಥಿ ಜಯಪ್ರದಾ ಕುರಿತು ಕೀಳು ಹೇಳಿಕೆಯನ್ನು ಸಮಾಜವಾದಿ ಪಕ್ಷದ ನಾಯಕರು ಮತ್ತೆ ಮುಂದುವರಿಸಿದ್ದಾರೆ. 'ನಮಗೆ ಅಲಿ, ಭಜರಂಗಬಲಿ ಸಾಕು. ಅನಾರ್ಕಲಿ ನಮಗೆ ಬೇಡ' ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆಜಂ ಖಾನ್‌ ಪುತ್ರ ಅಬ್ದುಲ್ಲಾ ಆಜಂ ಇದೀಗ ವ್ಯಂಗ್ಯವಾಡಿದ್ದಾರೆ. ಈ ಮೂಲಕ ನಟಿ ಜಯಪ್ರದ ಅವರನ್ನು ಮೊಘಲರ ಆಸ್ಥಾನದಲ್ಲಿ ನರ್ತಕಿಯಾಗಿದ್ದ ಅನಾರ್ಕಲಿಗೆ ಹೋಲಿಕೆ ಮಾಡಿದ್ದಾರೆ. ಈ ಹೇಳಿಕೆ ಬಗ್ಗೆ ಜಯಪ್ರದಾ ಕೂಡ ಕಿಡಿಕಾರಿದ್ದಾರೆ. ಇದು ತಂದೆ- ಮಕ್ಕಳ ಸಂಸ್ಕೃತಿ ಮತ್ತು ಅವರು ಮಹಿಳೆಯರನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ತೋರ್ಪಡಿಸುತ್ತದೆ ಎಂದು ಟೀಕಿಸಿದ್ದಾರೆ. ಒಟ್ಟಾರೆಯಾಗಿ ರಾಜಕೀಯದಲ್ಲಿ ಯಾರು ಯಾವಾಗ ಹೇಗೆ ಮಾತನಾಡುತ್ತಾರೆ ಎಂಬುದೇ ತಿಳಿಯದೆ ಅವರ ಮಾತುಗಳು ಟೀಕೆಗೆ ಗುರಿಯಾಗುತ್ತವೆ.. ನಟಿ ಜಯಪ್ರದಾ ವಿಷಯದಲ್ಲೂ ಕೂಡ ಇದೆ ಆಗಿರುವುದು.

Edited By

Manjula M

Reported By

Manjula M

Comments