3 ನೇ ಹಂತದ ಮತದಾನ ಶುರು : ಓಟ್ ಮಾಡಿ ಮಾದರಿಯಾದ ಮೋದಿ ತಾಯಿ...

23 Apr 2019 11:21 AM | General
238 Report

ಲೋಕಸಭೆ ಚುನಾವಣೆಯ 3 ನೇ ಹಂತದ ಮತದಾನ ನಡೆಯಲಿದ್ದು, ಒಟ್ಟು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.ಇಂದು ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ಹಕ್ಕು ಚಲಾಯಿಸಿದ್ದಾರೆ. ಹೀರಾಬೆನ್ ಅವರು ಅಹ್ಮದಾಬಾದ್ ನ ರೈಸಾನ್ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಮಾದರಿಯಾಗಿದ್ದಾರೆ. ಇನ್ನು ನರೇಂದ್ರ ಮೋದಿಯವರು ಎಂದಿನಂತೇ ಈ ಬಾರಿಯೂ ಅಹ್ಮದಾಬಾದ್ ನಲ್ಲಿ ತಮ್ಮ ತಾಯಿ ಹೀರಾಬೆನ್ ಮೋದಿ ಆಶೀರ್ವಾದ ಪಡೆದ ಬಳಿಕ ರನಿಪ್ ನ ನಿಶಾನ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.

ಈಗಾಗಲೇ ಪ್ರಧಾನಿ ಹುದ್ದೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ದೊಡ್ಡ ಸಮರವೇ ನಡೆದಿದೆ. ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗಾಗಿ ಹವಣಿಸುತ್ತಿದ್ರೇ ಇತ್ತ ಬಿಜೆಪಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಹಠದಲ್ಲಿದೆ. ಒಟ್ಟಾರೆ ಲೋಕಸಭೆ ಚುನಾವಣೆ ಈ ಬಾರಿ ದಾಖಲೆ ಬರೆಯುವ ಸಾಧ್ಯತೆ ಇದೆ.  ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ಭಾರೀಯೇ ಬದಲಾವಣೆಯಾಗಿದೆ. ಅದರಲ್ಲೂ ಮಂಡ್ಯ ಕ್ಷೇತ್ರ ಒಂಥರಾ ಹಾಟ್ ಸಿಟಿಯಾಗಿ ಮಾರ್ಪಟ್ಟಿದೆ. ಚುನಾವಣೆ ಬಳಿಕ ಸ್ವಲ್ಪ ತಣ್ಣಗಾಗಿದ್ದರೂ ಹವಾ ಮಾತ್ರ ಕಡಿಮೆಯಾಗಿಲ್ಲ. ದೊಡ್ಡಗೌಡರ ಜೆಡಿಎಸ್ ಪಾಳಯ ಈ ಬಾರಿ ನೆಲ ಕಚ್ಚುವ ಸಾಧ್ಯತೆ ಇದೆ ಎಂಬುದು ಕೆಲ ಸಮೀಕ್ಷೆಗಳ ವರದಿ. ಅದೇನಿದ್ದರೂ ಚುನಾವಣಾ ಫಲಿತಾಂಶ ಬರುವ ತನಕ ಕಾಯಲೇ ಬೇಕು.

Edited By

Kavya shree

Reported By

Kavya shree

Comments