ಗರ್ಭಿಣಿ ಮಹಿಳೆಯ ಹೊಟ್ಟೆ ಸವರಿದ ನಟ ಕಮ್ ಬಿಜೆಪಿ ಅಭ್ಯರ್ಥಿ : ವಿಡಿಯೋ ವೈರಲ್..!!!

20 Apr 2019 1:52 PM | General
1633 Report

ರಾಜಕಾರಣಿಗಳು, ಸಿನಿಮಾ ನಟರು  ಸಾರ್ವಜನಿಕ ಪ್ರದೇಶಗಳಲ್ಲಿ ಮಾಡುವ ಕೆಲ ಎಡವಟ್ಟುಗಳು ಬಹಳ ಬೇಗ ಸುದ್ದಿಯಾಗಿ ಬಿಡುತ್ತವೆ.  ಕೆಲವೊಮ್ಮೆ ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ವರ್ತಿಸಿ ಬಿಡುತ್ತಾರೆ. ಸಿನಿಮಾ ನಟರು ಆಗಿರುವ, ಬಿಜೆಪಿಯ ಅಭ್ಯರ್ಥಿ ಚುನಾವಣಾ ಪ್ರಚಾರದ ವೇಳೆ ಗರ್ಭಿಣಿ ಮಹಿಳೆ ಹೊಟ್ಟೆ ಸವರಿ ಇದೀಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಆ್ಯಕ್ಷನ್ ಕಿಂಗ್ ಎಂದೇ ಖ್ಯಾತರಾಗಿರುವ ಮಲಯಾಳಂ ನಟ ಸುರೇಶ್ ಗೋಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸದ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಅವರ ಫೋಟೋವೊಂ ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀಯೇ ಸುದ್ದಿ ಮಾಡುತ್ತಿದೆ. ಅಂದಹಾಗೇ ಸುರೇಶ್ ಗೋಪಿ ಕ್ಯಾಂಪೇನ್ ಮಾಡುವ ವೇಳೆ ಗರ್ಭಿಣಿ ಮಹಿಳೆಯ ಹೊಟ್ಟೆ ಸವರಿ ಮಗುವಿಗೆ ಆಶೀರ್ವಾದ ಮಾಡುತ್ತಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಆದರೆ ಕೆಲವರು ಇದನ್ನು ಚುನಾವಣಾದ ಗಿಮಿಕ್ ಎಂದು ಕರೆದರೆ, ಮತ್ತೆ ಕೆಲವರು ಮನಃ ಪೂರ್ವಕವಾಗಿ ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಟ್ರೋಲ್ ಆಗಿದ್ದು, ಆಶೀರ್ವಾದ ಮಾಡುವ ರೀತಿ ಸರಿಯಿಲ್ಲ.ಸುರೇಶ್ ಗೋಪಿಯವರ ಈ ನಡೆಯನ್ನು ಸಿಪಿಐ[ಎಂ] ತೀವ್ರವಾಗಿ ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಇದೊಂದು ಅನೈತಿಕ ಕೃತ್ಯ ಎನ್ನುವ ಮೂಲಕ ಖಂಡಿಸಿದ್ದಾರೆ.ಸುರೇಶ್ ಗೋಪಿ ಗರ್ಭಿಣಿ ಮಹಿಳೆಯ ಹೊಟ್ಟೆ ಸವರಿದ್ದನ್ನು ಮಹಿಳೆ ಕೂಡ ಸಂತಸದಿಂದಲೇ ಸ್ವೀಕರಿಸಿರುವುದು ವಿಡಿಯೋದಲ್ಲಿ ಕಾಣಬಹುದು.

Edited By

Manjula M

Reported By

Kavya shree

Comments