ರಮ್ಯಾ ಆಯ್ತು ಇದೀಗ ಮೋದಿಯನ್ನು ಹಿಯಾಳಿಸಿದ ಸ್ಟಾರ್ ಹೀರೋಯಿನ್…!!!

20 Apr 2019 10:46 AM | General
209 Report

ರಮ್ಯಾ  ಆದ ಮೇಲೆ ಇದೀಗ ಮತ್ತೊಬ್ಬ ಖ್ಯಾತ ನಟಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತೀ ಬಾರಿಯೂ ಮೋದಿಯನ್ನು ಹಿಯಾಳಿಸಿ ಬೈಯುತ್ತಿದ್ದ ರಮ್ಯಾ ಒಂದಿಲ್ಲೊಂದು ಟೀಕೆಗೆ ಗುರಿಯಾಗುತ್ತಿದ್ದರು. ಇವರಿಗೆ ಸಾಥ್ ನೀಡುವಂತೆ ಇದೀಗ ರಮ್ಯಾ ಜೊತೆ ಮತ್ತೊಬ್ಬ ಸ್ಟಾರ್ ಹೀರೋಯಿನ್ ಸೇರಿಕೊಂಡಿದ್ದಾರೆ.ಅಂದಹಾಗೇ ಮೋದಿಯನ್ನು ಒಬ್ಬ ಕ್ರಿಮಿನಲ್,ಐದು ವರ್ಷದಲ್ಲಿ ಅವರ ಸಾಧನೆ ಕೇವಲ ಶೂನ್ಯ.. ಪ್ರಧಾನಿಗಿರಿ ಬೇಕಾದ ಲಕ್ಷಣ ಮೋದಿಗಿಲ್ಲ.

ಸುಳ್ಳು ಹೇಳುವುದೇ ಅವರ ಕಾಯಕವಾಗಿ ಬಿಟ್ಟಿದೆ ಎಂದು ತೆಲುಗು ನಟಿ ವಿಜಯ ಶಾಂತಿ ಆರೋಪಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಮಾತಯಾಚನೆ ಮಾಡಿ ಮಾತನಾಡಿದ ವಿಜಯಶಾಂತಿ ಮೋದಿ ಉದ್ಯಮಿಗಳಿಗೆ ಸಹಾಯ ಮಾಡುತ್ತಾ, ದೇಶ ಕೊಳ್ಳೆ ಹೊಡೆಯೋದಕ್ಕೆ ಸಹಾಯ ಮಾಡುತ್ತಿದ್ದಾರೆ, ಜನ ಸಾಮಾನ್ಯರಿಗೆ ಅವರಿಂದ ಒಂದಿಷ್ಟು ಪ್ರಯೋಜನವಾಗಿಲ್ಲ. ಮೋದಿವಿರುದ್ಧ ಸುದ್ದಿ ಹಾಕಿದರೆ ಅಂತಹ ವಿಡಿಯೋಗಳನ್ನೇ ಮೋದಿ ಸರ್ವನಾಶ ಮಾಡುತ್ತಾರೆ. ಇದೇ ಕಾರಣಕ್ಕೆ ಮೋದಿಯನ್ನು ಕಂಡರೆ ಮೀಡಿಯಾಗಳಿಗೂ ಭಯವಿದೆ. ಇಂತಹ ವ್ಯಕ್ತಿಯನ್ನು ನಂಬಿ ಮೋಸ ಹೋಗುವುದಕ್ಕಿಂತ ಸೂಕ್ತ ವ್ಯಕ್ತಿಗಳನ್ನು ಆರಿಸುವುದು ಉತ್ತಮ. ಅದನ್ನು ಮತದಾರರೇ ನಿಶ್ಚಯಿಸಲಿ ಎಂದು ಕರೆ ನೀಡಿದರು.

Edited By

Kavya shree

Reported By

Kavya shree

Comments