ಈ ಎಲೆಕ್ಷನ್ ನಲ್ಲಿ ನಿಖಿಲ್ ಓಟು ನಿಖಿಲ್ ಗೆ ಇಲ್ಲ….!

18 Apr 2019 11:12 AM | General
366 Report

ಈ ಬಾರಿ ಲೋಕ ಸಭಾ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಕೇಂದ್ರದಲ್ಲಿ ರಾಹುಲ್ ಮತ್ತು ಮೋದಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದರೇ, ಇತ್ತ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಮಂಡ್ಯದಲ್ಲಿ ಹಿಂದೆಂದಿಗಿಂತಲೂ ಭಾರೀ ಹವಾ ಸೃಷ್ಟಿಸಿದೆ. ಒಟ್ಟಾರೆ  ರಣ ಕಣ ವಾಗಿರುವ ಮಂಡ್ಯದಲ್ಲಿ ಮತದಾನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.

ಅಂದಹಾಗೇ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಅವರು ಇಂದು ದೊಡ್ಡರಸಿನ ಕೆರೆ ಗ್ರಾಮದಲ್ಲಿ ಮತದಾನ ಮಾಡುತ್ತಿದ್ದಾರೆ.  ಪ್ರತಿಸ್ಪರ್ಧಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮಾತ್ರ ತಮ್ಮ ಮತವನ್ನು ತಮಗೇ ಹಾಕಿಕೊಳ್ಳುವ ಭಾಗ್ಯ ಇಲ್ಲ.ನಿಖಿಲ್‌ಗೆ ಮಂಡ್ಯದಲ್ಲಿ ಮತವಿಲ್ಲ. ಅವರು ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿರುವ ಕಾರಣ ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ವಾರ್ಡ್‌ನಲ್ಲಿ ನಿಖಿಲ್‌ ತಮ್ಮ ಮತ ಚಲಾಯಿಸಲಿದ್ದಾರೆ.

Edited By

Kavya shree

Reported By

Kavya shree

Comments