ಮುಂದಿನ ಚುನಾವಣೆಯಲ್ಲಿ ನನ್ನ ಪ್ರಚಾರ 'ಆ' ವ್ಯಕ್ತಿಗೆ ಮಾತ್ರ : ಡಿ ಬಾಸ್ ಮಂಡ್ಯದಲ್ಲಿ ಹೇಳಿದ್ಯಾರಿಗೆ…?!!!

17 Apr 2019 1:11 PM | General
5021 Report

ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಲ್ಲಿ ಪೆರೇಡ್ ರೀತಿ ಕೆಲಸ ಮಾಡುತ್ತಿರುವ  ಡಿ ಬಾಸ್ ಮತ್ತು ಯಶ್ ಪ್ರಚಾರ  ನಿನ್ನೆ ಕೊನೆಯಾಗಿದೆ. ಕೊನೆ ಹಂತದಲ್ಲಿ ಸ್ವಾಭಿಮಾನದ ಸಮಾವೇಶ ಚುನಾವಣಾ ಪ್ರಚಾರದಲ್ಲಿ ಇಬ್ಬರು ತೊಡಗಿಸಿಕೊಂಡಿದ್ದರು. ಈ ವೇಳೆ ಸಿಎಂ ಕುಮಾರ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ದರ್ಶನ್ ಅವರು, ನಾವು ಜೋಡೆತ್ತುಗಳ ಹಾಗೇ ಶ್ರಮಿಸಿದ್ದೇವೆ. ಅಮ್ಮನ ಬೆನ್ನಿಗೆ ನಿಂತಿದ್ದೇವೆ. ನೀವು ಅವರನ್ನು ಜಯಶಾಲಿಯನ್ನಾಗಿ ಮಾಡಿದ್ರೆ ನಿಮ್ಮ ಋಣವನ್ನು ಸಾಯೋತನಕ ಮರೆಯೊಲ್ಲ. ಒಂದು ಅವಕಾಶ ಕೊಟ್ಟಿ ನೋಡಿ ಎಂದು ಮನವಿ ಮಾಡಿಕೊಂಡರು.

ನಾನೆಂದೂ ಯಾವುದಕ್ಕೂ ಹೆದರೋನಲ್ಲ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ. ನನ್ನ ಬಗ್ಗೆ ಅಪಪ್ರಚಾರ  ಮಾಡಿದ ಅವರರಿಗೆ ಏನು ಸಿಗುತ್ತದೆ. ನಾನೆಂದು  ಅವರ ಹಾಗೇ ನಡೆದುಕೊಂಡಿಲ್ಲ. ನಾನು ನನ್ ಕೆಲಸದಲ್ಲಿ ಮಗ್ನನಾಗಿದ್ದೆ, ನನ್ನ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಿದ್ರು. ನಾನೆಂದು ಅದಕ್ಕೆ ತಲೆಕೆಡಿಸಿಕೊಂಡವನೇ ಅಲ್ಲ ಎಂದಿದ್ದಾರೆ ಡಿ ಬಾಸ್ . ಅಷ್ಟೇ ಅಲ್ಲಾ ಮುಂದಿನ ಎಲೆಕ್ಷನ್ ನಲ್ಲಿ ಆ ವ್ಯಕ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾದರೇ  ನಾನು ಅವರ ಪರ ಕ್ಯಾಂಪೇನ್ ಮಾಡ್ತೀನಿ ಎಂದು ಮಂಡ್ಯದ  ವ್ಯಕ್ತಿಯ ಬಗ್ಗೆ ಮಾತನಾಡಿದ್ದಾರೆ.  ದರ್ಶನ್ ಪುಟ್ಟಣ್ಣಯ್ಯ ಅವರನ್ನು ನೋಡಿದರೇ ನಿಜಕ್ಕೂ ನನಗೆ  ಹೆಮ್ಮೆ ಎನಿಸುತ್ತದೆ.  ಅವರು  ವಿದೇಶದಲ್ಲಿ   ವ್ಯಾಸಂಗ ಮುಗಿಸಿ ಬಂದಿದ್ದಾರೆ. ತಂದೆಯಂತೇ ತಾವು ಕೂಡ ರೈತ ಪರವಾಗಿ ನಿಲ್ಲಲು ಪಣ ತೊಟ್ಟಿದ್ದಾರೆ ಎಂದು ದರ್ಶನ್ ಅವರ ಬಗ್ಗೆ ಮಾತನಾಡಿದ್ರು ಚಾಲೆಂಜಿಂಗ್ ಸ್ಟಾರ್. ಪುಟ್ಟಣ್ಣಯ್ಯ ರೈತರಿಗಾಗಿಯೇ ದುಡಿದ್ರು ಇದೀಗ ಅವರದ್ದೇ ಹಾದಿಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಸಾಗುತ್ತಿದ್ದಾರೆ ಎಂದು ಚಾಲೆಂಜಿಂಗ್ ಸ್ಟಾರ್ ಹೇಳಿದ್ರು. ಮುಂದಿನ ಎಲೆಕ್ಷನ್ ನಲ್ಲಿ ದರ್ಶನ್ ಪುಟ್ಟಣ್ಣಯ್ಯ ನಿಂತುಕೊಂಡರೇ  ಖಂಡಿತಾ ನಾನು ಅವರ ಪರ ಪ್ರಚಾರಕ್ಕೆ ಬರುತ್ತೀನಿ ಎಂದು ಹೇಳಿದರು. ಅವರ ಬಗ್ಗೆ, ವಿದೇಶದಲ್ಲಿ ಓದಿದವರು ಇಲ್ಲೇನು ಮಾಡ್ತಾರೆ ಎಂದು ಅಪಪ್ರಚಾರ ಮಾಡಿದ್ರು.ಅವರು ಎಂತಹ ವ್ಯಕ್ತಿ ಗೊತ್ತೆ. ನಾನು ಮುಂದೆ ಪಾಂಡವಪುರದಲ್ಲಿ ಪ್ರಚಾರ ಮಾಡಿದರೆ ಅದು ದರ್ಶನ್​ ಪುಟ್ಟಯ್ಯ ಪರ ಮಾತ್ರ ಎಂದು ಮಾತು ನೀಡಿದರು.

Image result for darshan puttannaiah

Edited By

Kavya shree

Reported By

Kavya shree

Comments