ಫಸ್ಟ್ ಟೈಮ್ ಓಟ್ ಮಾಡ್ತಿರುವವರಿಗೆ ಹೊಡೀತು ಜಾಕ್ ಪಾಟ್ :ಏನೆಲ್ಲಾ ಸಿಕ್ತಿದೆ ಗೊತ್ತಾ..?!!!

16 Apr 2019 11:52 AM | General
4848 Report

ಈ ಬಾರಿ ಲೋಕ ಸಭೆ ಚುನಾವಣೆ ಜೋರಾಗಿಯೇ ಸದ್ದಾಗುತ್ತಿದೆ. ಒಂದು ಕಡೆ ರಾಜ್ಯ ರಾಜಕೀಯ ಭಾರೀ ಕುತೂಹಲ ಮೂಡಿಸಿದ್ರೆ ಮತ್ತೊಂದ್ ಕಡೆ ಕೇಂದ್ರದಲ್ಲೂ ಅಷ್ಟೇ ಹೈಪ್ ಕ್ರಿಯೇಟ್ ಆಗಿದೆ. ಒಟ್ಟಾರೆ ಈ ಬಾರಿ ಪ್ರತೀಯೊಬ್ಬರು ಮತದಾನ ಮಾಡಬೇಕೆಂದು ಕೇಂದ್ರ ಚುನಾವಣಾ ಆಯೋಗ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಇದಕ್ಕೆ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ಕೂಡ ಕೈ ಜೋಡಿಸಿವೆ. ಇದಕ್ಕೆ ಇಂಬು ನೀಡುವಂತೆ , ಮೊದಲು ಮತದಾನ ಮಾಡುವವರನ್ನು ಪ್ರೋತ್ಸಾಹಿಸಲು ಇಲ್ಲೊಬ್ಬರು ಬಂಪರ್ ಕೊಡುಗೆಯೊಂದನ್ನು ನೀಡಲು ಮುಂದಾಗಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆ ಕೆಲವರಿಗೆ ಅದೃಷ್ಟದ ಬಾಗಿಲೆ ತೆರೆದುಕೊಳ್ಳುವಂತೆ ಮಾಡಿದೆ. ಒಂದು ಕಡೆ ಸ್ಪರ್ಧೆ ಮಾಡುತ್ತಿರುವ ಸ್ಪರ್ಧಿಗಳಿಗೆ ಇದೊಂದು ಯುದ್ಧ ಎನಿಸಿದರೇ, ಫಸ್ಟ್ ಟೈಮ್ ಓಟ್ ಮಾಡ್ತಿರುವವರಿಗೆ ಬಂಪರ್ ಆಫರ್ ಸಿಗುತ್ತಿದೆ.ಮೊದಲ ಬಾರಿಗೆ ಮತದಾನ ಮಾಡಿದವರಿಗೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ 2 ರೂ. ರಿಯಾಯಿತಿ ನೀಡುವುದಾಗಿ ಶಿವಮೊಗ್ಗದ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಘೋಷಿಸಿದ್ದು, ಇದರ ಜೊತೆಗೆ ಟೆಕ್ಸ್ ಟೈಲ್ಸ್ ಅಂಗಡಿ ಮಾಲೀಕರೊಬ್ಬರು ರಿಯಾಯಿತಿ ದರದಲ್ಲಿ ವಸ್ತ್ರಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಇದೀಗ ಮೈಸೂರಿನ ಹೋಟೆಲ್ ಮಾಲೀಕರ ಸಂಘ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ-ಯುವತಿಯರಿಗೆ ತಿಂಡಿ ಹಾಗೂ ಊಟದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದ್ದಾರೆ.ಜೊತೆಗೆ ಕೆಲವು ವಸತಿ ಗೃಹಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ದಂಪತಿಗಳಿಗೂ ಶೇಕಡ 50ರಷ್ಟು ರಿಯಾಯಿತಿ ನೀಡಲು ಮುಂದಾಗಿವೆ.

Edited By

Kavya shree

Reported By

Kavya shree

Comments