ಪರೋಕ್ಷವಾಗಿ ಮಂಡ್ಯಡ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ರಿಯಲ್ ಸ್ಟಾರ್ : ಯಾರ ಪರ ಗೊತ್ತಾ..?!!!

15 Apr 2019 1:04 PM | General
2180 Report

ಮಂಡ್ಯ ಲೋಕಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದಂತೇ ಸ್ಪರ್ಧಿಗಳ ಮನಸಲ್ಲೂ ಎಲೆಕ್ಷನ್ ಬಿಸಿ ದಿಢೀರ್ ಹೆಚ್ಚಾಗಿದೆ. ಈ ಸಲ ಹೇಗಾದರೂ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿಯೇ ತೀರ ಬೇಕೆಂದು ಹಠ ತೊಟ್ಟಿರುವ ಬಾಕ್ಸ್ ಆಫೀಸ್ ಸುಲ್ತಾನರು. ಮತ್ತೊಂದು ಕಡೆ ಜೆಡಿಎಸ್ ಪಾಳಯದಲ್ಲಿ ಮಗನನ್ನು ಮಹಾರಾಜರನ್ನಾಗಿ ಮಾಡಬೇಕೆಂದು, ಮುಖ್ಯಮಂತ್ರಿ ಅಖಾಡದಲ್ಲಿ ತೊಡೆ ತಟ್ಟಿದ್ದಾರೆ. ಒಟ್ಟಾರೆ ಎರಡು ಕಡೆಯಿಂದ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಇದರ ಮಧ್ಯೆ ಮಂಡ್ಯ ಅಕ್ಷರಶಃ ರಣ ಕಣ ಆಗಿರೋದಂತೂ ಸತ್ಯ.

ಈ ಸಲ ಉಪೇಂದ್ರ ಕೂಡ ತಮ್ಮ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆ ಬರೆಯುತ್ತಿದ್ದಾರೆ. ತಮ್ಮ ಪ್ರಜಾಕೀಯ ಪಕ್ಷದಿಂದ ಮಂಡ್ಯದಲ್ಲೂ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಕ್ಯಾಂಪೇನ್ ಕೂಡ ಮಾಡಿ ಬಂದಿದ್ದಾರೆ. ಆದರು ಮಂಡ್ಯದಲ್ಲಿ ಸ್ಪರ್ಧಿಯೊಬ್ಬರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್  ಅವರ ಪರ, ನಟ , ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಬ್ಯಾಟ್ ಬೀಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ, ಅಂಬರೀಶ್ ಅಣ್ಣನವರ ಪತ್ನಿ, ಅವರು ನಮಗೆ ಅತ್ತಿಗೆ ಇದ್ದಂಗೆ,ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.ಇನ್ನು ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು, ಬಳ್ಳಾರಿ ಹೊರತು ಪಡಿಸಿ ನಮ್ಮ ಪಕ್ಷದಿಂದ 27 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ರಾಜಕೀಯ ಎನ್ನುವುದು ಒಂದು ಉತ್ತಮ ಸಮಾಜ ಸೇವೆ ಎಂದಿದ್ದಾರೆ. ಆದರೆ ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ ಸೂಪರ್ ಸ್ಟಾರ್ ಉಪ್ಪಿ, ಕುಟುಂಬ ರಾಜಕಾರಣಕ್ಕೆ ನನ್ನ ವಿರೋಧವಿಲ್ಲ. ನಿಖಿಲ್ ಕುಮಾರ ಸ್ವಾಮಿ ಮಂಡ್ಯದಿಂದ ಸ್ಪರ್ಧಿಸುತ್ತಿರುವುದರ ಬಗ್ಗೆ ನನ್ನ ಅಭ್ಯಂತರ ವಿಲ್ಲ. ಅವರು ನಿಂತಿರೋದಕ್ಕೆ ಬೆಂಬಲವಿದೆ. ಕುಟುಂಬ ರಾಜಕೀಯ ಮಾಡೋಕೆ ಯಾವ ಅಭ್ಯಂತರವೂ ಇಲ್ಲವೆಂದು ಪರೋಕ್ಷವಾಗಿ ನಿಖಿಲ್ ಗೂ ರಿಯಲ್ ಸ್ಟಾರ್ ಬೆಂಬಲ ಸೂಚಿಸಿದ್ದರು. ಆದರೆ ಇದೀಗ ಅವರ ಈ ಹೇಳಿಕೆ ಮತ್ತಷ್ಟು ಗೊಂದಲ ಮಯವಾಗಿಸಿದೆ.

Edited By

Kavya shree

Reported By

Kavya shree

Comments