ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಅಸ್ವಸ್ಥ..!

13 Apr 2019 1:59 PM | General
189 Report

ಲೋಕ ಸಭೆ ಚುನಾವಣೆ ಕಾವು ಜೋರಾಗುತ್ತಿದ್ದಂತೇ ಬಿಸಿಲು ಕೂಡ ಮತ್ತಷ್ಟು ಹೆಚ್ಚಾಗುತ್ತಿದೆ. ಬೇಸಿಗೆ ಬಿಸಿಲ ಝಳದ ನಡುವೆಯೂ ಅಭ್ಯರ್ಥಿಗಳು ಹಗಲಿರುಳು ಮತಬೇಟೆ ಮಾಡುತ್ತಿದ್ದಾರೆ. ಆದರೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.

ಬಿಸಿಲ ನಡುವೆ ಕ್ಯಾಂಪೇನ್ ಮಾಡುತ್ತಿದ್ದ ಅವರು ಅಸ್ವಸ್ಥರಾಗಿದ್ದಾರೆ. ನಿತ್ರಾಣರಾಗಿದ್ದ ಅವರನ್ನು  ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದೆ ಎನ್ನಲಾಗಿದೆ.ಇನ್ನು ಶ್ರೀನಿವಾಸ್ ಪ್ರಸಾದ್‌ ಅವರು ಮಧುಮೇಹದಿಂದ ಬಳಲುತಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೇ ಕ್ಯಾಂಪೇನ್ ಶುರು ಮಾಡಿದ ಅವರಿಗೆ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಾಗಿಸಿದ್ದು, ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

Edited By

Kavya shree

Reported By

Kavya shree

Comments