ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡಕ್ಕೆ ಇಂದಿಗೆ 100 ವರ್ಷ..

13 Apr 2019 12:16 PM | General
360 Report

ಭಾರತದ ಇತಿಹಾಸ ಪುಟಗಳನ್ನು ಒಮ್ಮೆ ತೆರೆದಾಗ ನಮ್ಮ ಕಣ್ಣ ಮುಂದೆ ಬರುವ ಘಟನೆಗಳಲ್ಲಿ ಜಲಿಯನ್ ವಾಲಾಬಾಗ್ ಕೂಡ ಒಂದು.. ಇತಿಹಾಸದಲ್ಲಿ ಎಲ್ಲರೂ ಕೂಡ ಓದಿಯೇ ಇರುತ್ತಾರೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ,,, 1919 ಏಪ್ರಿಲ್ 13 ರಂದು ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಸಾವಿರಾರು ಭಾರತೀಯರನ್ನು ಬ್ರಿಟೀಷರು ಗುಂಡಿಕ್ಕಿ ಕೊಂದರು.

ಭಾರತೀಯರ ಹೃದಯದಲ್ಲಿ ಎಂದೂ ಮಾಸದ ಭೀಕರ ಕೃತ್ಯ ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡ. ಭಾರತೀಯರನ್ನ ಬ್ರಿಟೀಷರು ಗುಂಡಿಕ್ಕಿ ಕೊಂದು ಇಂದಿಗೆ 100 ವರ್ಷ ಕಳೆದಿವೆ.. ಬ್ರಿಟೀಷರ ಈ ಕೃತ್ಯಕ್ಕೆ ಸುಮಾರು 500ಕ್ಕೂ ಹೆಚ್ಚು ಮುಗ್ಧ ಭಾರತೀಯರು ಪ್ರಾಣ ಕಳೆದುಕೊಂಡಿದ್ದರು. ಭೀಕರ ಭಯೋತ್ಪಾದಕ ಕೃತ್ಯ ನಡೆದು ಶತಮಾನ ಕಳೆದರೂ ಸಹ ಇಂದಿಗೂ ಸಹ ಬ್ರಿಟನ್ ಭಾರತೀಯರ ಕ್ಷಮೆ ಕೇಳದೇ ಇರೋದು ದುರಂತ.. ಜಲಿಯನ್ ವಾಲಾಭಾಗ್​​ಗೆ ಭೇಟನೀಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಡಿದವರ ಆತ್ಮಕ್ಕೆ ಇಂದು ಶಾಂತಿ ಕೋರಿದರು. ಬ್ರಿಟೀಷರ ಈ ಕೃತ್ಯವನ್ನು ಖಂಡಿಸಿದ್ದಾದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ.. ನೀವು ಒಮ್ಮೆ ಜಲಿಯನ್ ವಾಲಾಬಾಗ್ ಗೆ ಬೇಟಿಕೊಟ್ಟರೆ ಅಲ್ಲಿ ಇನ್ನೂ ಗುಂಡಿನ ದಾಳಿಯ ಗುರುತುಗಳು ನಿಮಗೆ ಸಿಗುತ್ತವೆ.

Edited By

Manjula M

Reported By

Manjula M

Comments