ಯಶ್ ಅಭಿಮಾನಿಗಳಿಂದ ಕುಮಾರ ಸ್ವಾಮಿಗೆ ಆಪತ್ತು….

12 Apr 2019 5:28 PM | General
242 Report

ಮುಖ್ಯಮಂತ್ರಿ ಕುಮಾರ ಸ್ವಾಮಿ ಲೋಕ ಸಭೆ ಚುನಾವಣೆಯ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಗನಿಗೆ ಒತ್ತಾಸೆಯಾಗಿ ಇಡೀ ಜಿಲ್ಲೆಯನ್ನು ಸುತ್ತುತ್ತಿದ್ದರೇ ಇತ್ತ ಸುಮಲತಾಗೆ ದರ್ಶನ್, ಯಶ್ ಜೋಡೆತ್ತುಗಳಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಮಂಡ್ಯ ರಣ-ಕಣ ಆಗಿರೋದಂತೂ ಸತ್ಯ. ಯಶ್ ಮಂಡ್ಯದ ಬಳಿ ಇರುವ ಮಲ್ಲನ ಕುಪ್ಪೆ ಪ್ರಚಾರದ ವೇಳೆ ಅಭಿಮಾನಿಗಳು, ಯಶ್ ಪರ ಜೈ ಕಾರ ಕೂಗುತ್ತಿದ್ದ ಸಂದರ್ಭದಲ್ಲಿ, ಯಶ್ ಅಭಿಮಾನಿಗಳಿಂದ ಈ ಮೇಲಿನ ಮಾತು ಕೇಳಿ ಬಂತು.

ಮಂಡ್ಯದ ಜನ ಫಿಜ್ಜಾ, ಬರ್ಗರ್ ತಿನ್ನೋದಿಲ್ಲ. ಮಂಡ್ಯದ ಕೀರ್ತಿ ಪಸರಿಸಿದ್ದು ಅಂಬಿಯಣ್ಣ. ಮಂಡ್ಯಗೆ ಅಂಬಿನೇ ಗೌಡ. ಸುಮಲತಾನೇ ಗೌಡ್ತಿ ಎಂದು ಕೂಇದರು. ಅಷ್ಟೇ ಅಲ್ಲಾ, ಮದ್ದೂರ್  ವಡೆ ತಿಂದು ಸ್ವಾಭಿಮಾನ ಬೆಳೆಸಿಕೊಂಡವರು ನಾವು ಎಂದು ಕೂಡ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕುಮಾರ ಸ್ವಾಮಿ ಕುಮ್ಮಕ್ಕಿನಿಂದ ಅದೆಷ್ಟು ಮಂದಿ ಸುಮಲತಾ ತಂದು ನಿಲ್ಸಿದ್ರೂ ಸರಿಯೇ ಸುಮಲತಾ ಅಂಬರೀಶ್ ಗೆ ಸರಿಸಾಟಿಯಾಗಲಾರರು ಎಂದಿದ್ದಾರೆ. ಯಶ್ ಸುಮಲತಾ ಕ್ರಮಸಂಖ್ಯೆ 20 ಎನ್ನುತ್ತಿದ್ದಂತೇ, ಇತ್ತ ಅಭಿಮಾನಿಗಳು ಕುಮಾರ ಸ್ವಾಮಿಗೆ ಆಪತ್ತು ಎಂದು ಜೋರಾಗಿ ಕೂಗುವುದರ ಮೂಲಕ ರಾಕಿಂಗ್ ಸ್ಟಾರ್ ಪ್ರಚಾರಕ್ಕೆ ಬೆಂಬಲ ಸೂಚಿಸಿದ್ದಾರೆ.

Edited By

Kavya shree

Reported By

Kavya shree

Comments