ಕ್ಯಾಂಪೇನ್ ವೇಳೆ ಯುವಕನಿಗೆ ಕಪಾಳ ಮೋಕ್ಷ ಮಾಡಿದ ನಟಿ ಖುಷ್ಬೂ : ವಿಡಿಯೋ ವೈರಲ್!!!

11 Apr 2019 12:02 PM | General
1415 Report

ನಟಿ ಖುಷ್ಬೂ ಇಂದು ಚುನಾವಣಾ ಪ್ರಚಾರಕ್ಕೆಂದು ನಗರಕ್ಕೆ ಆಗಮಿಸಿದ್ದಾರೆ. ಎಐಸಿಸಿ ವಕ್ತಾರೆ ನಟಿ ಖುಷ್ಬೂ ಅವರು ಕ್ಯಾಂಪೇನ್ ಮಾಡುವ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕ್ಷೇತ್ರ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರಕ್ಕೆಂದು ಅಗಮಿಸಿದ ನಟಿ, ಚುನಾವಣಾ ಸಂದರ್ಭದಲ್ಲಿ ಆ ಯುವನ ವಿರುದ್ಧ ಸಿಡಿದು ಬಿದ್ದಿದ್ದಾರೆ. ಇಂದಿರಾ ನಗರದ ಹೊಯ್ಸಳ ನಗರದಲ್ಲಿ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ನಡೆಯುತ್ತಿತ್ತು.

ಆ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ ನಾಯಕರು ಕೂಡ ಹಾಜರಿದ್ದರು. ಜನರ ನೂಕು ನುಗ್ಗಲಿನ ಮಧ್ಯೆಯೇ ಬಂದ ಖುಷ್ಬೂ, ಜನರನ್ನ ಅತ್ತ ಸರಿಯುವಂತೆ ಕೇಳುತ್ತಿದ್ದರು. ಅವರು ಬರುವುದಕ್ಕೆ ಪೊಲೀಸರು ಜನರನ್ನು ಸಡಿಲಿಸುವಂತೆ ಅನುವು ಮಾಡುತ್ತಿದ್ದಾರೆ. ಈ ಮಧ್ಯೆ ಯುವಕನೊಬ್ಬ ಖುಷ್ಬೂ ಜೊತೆ ಅನುಚಿತವಾಗಿ ವರ್ತಿಸಿದ್ದಾನೆಮದು ತಿಳಿದುಬಂದಿದೆ. ಅಲ್ಲಿಯೇ ಹಿಂದಕ್ಕೆ ಬಂದ ಖುಷ್ಬೂ ದಿಢೀರ್ ಅಂತಾ ಆ ಯುವಕನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದ್ದು ಕಾಂಗ್ರೆಸ್ ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ಈ  ಮಧ್ಯೆ ಬಂದ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಅಲ್ಲಿದ್ದ ಕೆಲವರು ಆ ಹುಡುಗ ನಟಿಯ ಸೊಂಟ ಮುಟ್ಟಿದ್ದಾನೆ. ಜನರ ನಡುವೆ ಹಿಂದಕ್ಕೆ ತಿರುಗಿ ನೋಡಿ ಆ ಹುಡುಗನಿಗೆ ಸಖತ್ತಾಗಿ ಕಪಾಳಕ್ಕೆ ಹೊಡೆದಿದ್ದಾರೆ ನಟಿ ಎಂದಿದ್ದಾರೆ.

Edited By

Kavya shree

Reported By

Kavya shree

Comments