ಗೆದ್ದರೆ ಬಿಜೆಪಿ ಸೇರುವುದರ ಬಗ್ಗೆ ಸುಮಲತಾ ಹೇಳಿದ್ದೇನು ಗೊತ್ತಾ...?!!!

10 Apr 2019 2:03 PM | General
245 Report

ಮಂಡ್ಯ ಲೋಕಸಭೆ ಚುನಾವಣೆ ಕ್ಷೇತ್ರದ  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಒಂದು ವೇಳೆ ಗೆದ್ದರೆ ಅವರು ಬಿಜೆಪಿಗೆ ಸೇರಲಿದ್ದಾರೆಂಬ ವದಂತಿಗಳು ಹೆಚ್ಚಾಘುತ್ತಿವೆ. ಅಷ್ಟೇ ಅಲ್ಲದೇ ಮೈತ್ರಿ ಅಭ್ಯರ್ಥಿ ಕೂಡ ಮಾತನಾಡುವ ವೇಳೆ ಅವರು ಬಿಜೆಪಿ ಎಂದು ಹೇಳಿಕೆ ನೀಡಿದ್ದಾರೆ. ಇದಿಷ್ಟೇ ಅಲ್ಲದೇ ಅನೇಕ ಬಿಜೆಪಿ ನಾಯಕರು ನಾವು ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾಗೆ ನಮ್ಮ ಬೆಂಬಲವಿದೆ,ಹಾಗಾಗಿಯೇ ನಾವು ಮಂಡ್ಯದಲ್ಲಿ ಬಿಜೆಪಿ ಕ್ಯಾಂಡಿಡೇಟ್ ನಿಲ್ಲಿಸುತ್ತಿಲ್ಲವೆಂದಿದ್ದರು.

ಈ ಎಲ್ಲಾ ವಿಚಾರಗಳಿಂದಲೂ ಸುಮಲತಾ ಗೆದ್ದರೆ ಖಂಡಿತಾ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆಂದು ಅಭಿಪ್ರಾಯಿಸಲಾಗಿದೆ. ಈ ವದಂತಿಗಳಿಗೆ ಸುಮಲತಾ ಅವರೇ ಖುದ್ದು ಸ್ಪಷ್ಟನೆ ನೀಡಲಿದ್ದಾರೆ. ಅವರು ಬಿಜೆಪಿ ಸೇರಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಹೇಳಿದ್ದಾರೆ.ಅಂಬರೀಶ್ ಕೂಡ ಪಕ್ಷಾತೀತ ವ್ಯಕ್ತಿಯಾಗಿದ್ದರು ನಾನು ಕೂಡ ಹಾಗೆಯೇ ಇರುತ್ತೇನೆ. ನಾನು ಬಿಜೆಪಿ ಸೇರಿಕೊಳ್ಳುವುದಿಲ್ಲವೆಂದಿದ್ದಾರೆ.ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದವರು ಯಾವುದೇ ಪಕ್ಷ ಸೇರ್ಪಡೆಯಾಗುವ ಅವಕಾಶಗಳಿಲ್ಲ. ಬೇರೆ ಪಕ್ಷಕ್ಕೆ ಹೊರಗಿನಿಂದ ಬೆಂಬಲ ನೀಡಬಹುದಾಗಿದ್ದು, ಅಂತಹ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಮತದಾರರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ನನಗೆ ಕಾಂಗ್ರೆಸ್, ರೈತಸಂಘದವರು ಬೆಂಬಲ ಸೂಚಿಸಿದಂತೇ ಬಿಜೆಪಿ ಕೂಡ ಬೆಂಬಲ ನೀಡಿದೆ ಎಂದಿದ್ದಾರೆ.

Edited By

Kavya shree

Reported By

Kavya shree

Comments