ಈ ಸಲ ಮತದಾನ ಮಾಡದೇ ಇದ್ದವರಿಗೆ ಕಾದಿದೆ ಬಿಗ್ ಶಾಕ್ : ಏನ್ ಗೊತ್ತಾ..?!!!

10 Apr 2019 11:09 AM | General
436 Report

ಪ್ರತೀ ಚುನಾವಣೆಯಲ್ಲಿ ಮತದಾನದ ಏರಿಕೆ ಮಾಡುವ ಸಲುವಾಗಿ ಚುನಾವಣಾ ಆಯೋಗ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಅದರ ಪ್ರಮಾಣ ಪ್ರತೀ ಸಲ ನಿರೀಕ್ಷಿಸಿದಷ್ಟು ಸಿಗುತ್ತಿಲ್ಲ. ಆದರೆ ಈ ಬಾರಿ ಚುನಾವಣಾ ಆಯೋಗ ವಾರ್ನಿಂಗ್ ಒಂದನ್ನು ನೀಡಿದೆ. ಏನಾದರೂ ವೋಟ್ ಮಾಡದೇ, ರಜೆ ಎಂದು ಮನೆಯವರ ಜೊತೆ ಹೊರಗೆ ಸುತ್ತಾಡುವುದಕ್ಕೋ, ಪ್ರವಾಸಕ್ಕೆಂದು ಹೋದವರಿಗೆ ಶಾಕ್ ನೀಡಲು ಕಾದಿದೆ. ಅದೇನ್ ಗೊತ್ತಾ..?

ಪ್ರತೀ ಚುನಾವಣೆಯಲ್ಲಿ ಐಟಿ ಉದ್ಯೋಗಿಗಳು ಮತದಾನದ ವೇಳೆ ಚಕ್ಕರ್ ಹೊಡೆದು  ರಜೆಯ ಮಜಾ ಅನುಭವಿಸಲು ಹೋಗುತ್ತಿದ್ದರು. ಆದರೆ ಇದಕ್ಕೆಲ್ಲಾ ಕಡಿವಾಣ ಹಾಕಲು ಈ ಬಾರಿ ಶಿಸ್ತಿನ ಕ್ರಮ ಜರುಗಿಸಲಾಗಿದೆ. ಇದೇ 18 ಮತ್ತು 23ರಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಲಿದೆ. ಸಾಮಾನ್ಯವಾಗಿ ಐಟಿ ಉದ್ಯೋಗಿಗಳು ಮತದಾನದ ದಿನ ರಜೆ ಹಾಕಿ ಕುಟುಂಬದವರ ಜೊತೆ ಸಮಯ ಕಳೆಯಲು ಹೊರ ಹೋಗುತ್ತಿದುದ್ದೇ ಹೆಚ್ಚು. ಚುನಾವಣಾ ಆಯೋಗ ಎಷ್ಟೇ ಕ್ರಮ ಕೈಗೊಂಡರೂ ಇದನ್ನು ಮಾತ್ರ ತಡೆಯುವುದಕ್ಕೆ ಆಗುತ್ತಿಲ್ಲ. ಜಾಗೃತಿ ಬೀಜ ಬಿತ್ತಿದ್ರೂ ಸಹ ನಮಗೂ ಇದಕ್ಕೂಸಂಬಂಧವೇ ಇಲ್ಲವೆಂಬಂತೆ ಟೆಕ್ಕಿಗಳು ವರ್ತಿಸುತ್ತಿದ್ದರು.

Related image

ಇದನ್ನು ತಪ್ಪಿಸಲು ಚುನಾವಣಾ ಆಯೋಗ ಈಗಾಗಲೇ ಐಟಿ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದೆ. ಮತದಾನದಂದು ನೀವು ರಜೆ ನೀಡಿದರೆ ಮತಗಟ್ಟೆಗೆ ಬಂದು ನಿಮ್ಮ ಉದ್ಯೋಗಿಗಳು ಮತ ಚಲಾಯಿಸುವುದಿಲ್ಲ. ಬದಲಿಗೆ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ಹಾಗೊಂದು ವೇಳೆ ಐಟಿ ಉದ್ಯೋಗಿಗಳು ವೋಟ್ ಮಾಡದೇ ಪ್ರವಾಸಕ್ಕೆಂದು ತೆರಳುತ್ತಾರೆ. ಹಾಗಾಗಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವರ ಸಂಬಳಕ್ಕೆ ಕತ್ತರಿ ಹಾಕಬೇಕು ಎಂದು ತಿಳಿಸಿದೆ. ಈ ಬಾರಿ ಚುನಾವಣಾ ಆಯೋಗ ತಮ್ಮ ಉದ್ಯೋಗಿಗಳಿಗೆ ಯಾವುದೇ ರೀತಿಯ ರಜೆ ನೀಡಬಾರೆಂದು ಘೋಷಿಸಿದೆ.ಚುನಾವಣಾ ಆಯೋಗದ ಸೂಚನೆಯಂತೆ ಮತದಾನದ ದಿನದಿಂದ ವೇತನ ಸಹಿತ ರಜೆ ನೀಡಲಾಗುತ್ತಿದೆ.  ನಿಮಗೆ ಮತದಾನದ ದಿನದಂದು ವೇತನ ಸಿಗಬೇಕಾದರೆ ನೀವು ಮತ ಚಲಾಯಿಸಿರುವುದಕ್ಕೆ ಸಾಕ್ಷಿ ನೀಡಬೇಕು. ತಮ್ಮ ಕಂಪನಿಗಳ ಹೆಚ್ ಆರ್'ಗಳಿಗೆ ಸಾಕ್ಷಿ ತಲುಪಿಸ ಬೇಕು. ಇಲ್ಲವೇದರೇ ನಿಮ್ಮ ವೇತನದಲ್ಲಿ ಕಂಪನಿಯ ಆಧಾರದ ಮೇಲೆ ಇಂತಿಷ್ಟು ಅಂತಾ ಕಡಿತಗೊಳಿಸಲಾಗುವುದು.

Edited By

Kavya shree

Reported By

Kavya shree

Comments