ಸುಮಲತಾ ಆಯ್ತು..!!  ಇದೀಗ ದರ್ಶನ್ ಯಾರ ಪರ ಪ್ರಚಾರ ಮಾಡುತ್ತಿದ್ದಾರೆ ಗೊತ್ತಾ..?

08 Apr 2019 9:24 AM | General
5935 Report

ಮಂಡ್ಯ ಲೋಕಸಭಾ ಅಖಾಡ ದಿನದಿಂದ ರಂಗೇರುತ್ತಿದೆ.. ಒಂದಲ್ಲ ಒಂದು ಸುದ್ದಿಗಾಗಿ ಸುದ್ದಿಯಾಗುತ್ತಲೇ  ಇದೆ… ಮಂಡ್ಯ ಇದೀಗ ಗಾಂಧಿನಗರ ಅನ್ನೋ ಫಿಲ್ ಎಲ್ಲರಿಗೂ ಆಗುತ್ತಿದೆ…ಯಾಕಂದ್ರೆ ಸ್ಟಾರ್ ನಾಯಕರು ಮಂಡ್ಯದಲ್ಲಿಯೇ ಬೀಡು ಬಿಟ್ಟಿದ್ದಾರೆ.. ಸುಮಲತಾ ಅವರನ್ನು  ಗೆಲ್ಲಿಸಲೇಬೇಕು ಎಂದು ಪಣ ತೊಟ್ಟು ಯಶ್ ಮತ್ತು ದರ್ಶನ್ ಹಾಗೂ ಇನ್ನಿತರ ಸ್ಟಾರ್ ಅಖಾಡಕ್ಕೆ  ಇಳಿದು ಬಿಸಿಲು ಎನ್ನದೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ಆದರೆ ಇದೀಗ ದರ್ಶನ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ್ದಿದ್ದಾರೆ..

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕೈ ನೋವಿನ ಕಾರಣಕ್ಕೆ ಸದ್ಯ ಪ್ರಚಾರಕ್ಕೆ ಬಿಡುವು ನೀಡಿರುವ ಅವರು, ಬೆಂಗಳೂರಿಗೆ ವಾಪಸಾಗಿದ್ದಾರೆ. ಇದೀಗ ಮಂಡ್ಯಕ್ಕೆ ಮತ್ತೆ ತೆರಳಲು ಸಿದ್ಧವಾಗಿರುವ ದರ್ಶನ್, ಅದಕ್ಕೂ ಮೊದಲು ಅಂದರೆ ಇಂದು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರ ಮತ ಯಾಚಿಸಲಿದ್ದಾರೆ. ಆ ಬಳಿಕ ದರ್ಶನ್ ಮಂಡ್ಯಕ್ಕೆ ತೆರಳಿ ಸುಮಲತಾ ಅಂಬರೀಶ್ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತದಾನ ನಡೆಯುವ 2 ದಿನಕ್ಕೂ ಮುನ್ನ ಅಂದರೆ ಏಪ್ರಿಲ್ 16 ರವರೆಗೆ ದರ್ಶನ್ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಒಲವನ್ನು ನೋಡುತ್ತಿದ್ದರೆ ಸ್ಟಾರ್ ಗಳು ಕೇವಲ ಒಬ್ಬರಿಗೂ ಮಾತ್ರ ಅಲ್ಲ…ಎಲ್ಲರಿಗೂ ಕೂಡ ಪ್ರಾಶಸ್ತ್ಯ ಕೊಡುತ್ತಾರೆ ಎಂಬುದು ಇದರಲ್ಲಿಯೇ ತಿಳಿಯುತ್ತದೆ.

Edited By

Manjula M

Reported By

Manjula M

Comments