ಇದೇ ತಿಂಗಳ 3 ನೇ ವಾರ ದ್ವಿತೀಯ ಪಿಯುಸಿ ಫಲಿತಾಂಶ..?

05 Apr 2019 10:58 AM | General
513 Report

ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮಹತ್ತರ ಪಾತ್ರವಹಿಸುವುದು ಎಸ್‌ಎಸ್‌ಎಲ್ ಸಿ.ಹಾಗೂ ದ್ವಿತೀಯ ಪಿಯುಸಿ.. ಈ ಹಂತಗಳಲ್ಲಿ ಮಕ್ಕಳು ಒಳ್ಳೆಯ ಅಂಕಗಳನ್ನು ಗಳಿಸಿದರೆ ಅವರ ಮುಂದಿನ ವಿದ್ಯಾಭ್ಯಾಸ  ಚೆನ್ನಾಗಿರುತ್ತದೆ ಎಂಬುದು ಪೋಷಕರ ವಿಚಾರವಾಗಿರುತ್ತದೆ. ಈಗಾಗಲೇ  ಎಸ್‌ಎಸ್‌ಎಲ್ ಸಿ.ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಮಕ್ಕಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಫಲಿತಾಂಶದ ದಿನಾಂಕ ಯಾವಾಗ ಬರಬಹುದು ಎಂದು ತಿಳಿಸಿದ್ದಾರೆ. ಎಸ್‌ಎಸ್‌ಎಲ್ ಸಿ.ಹಾಗೂ ದ್ವಿತೀಯ ಪಿಯುಸಿ ಫಲಿತಾಂಶವು ಏಪ್ರಿಲ್ 3 ಮತ್ತು ನಾಲ್ಕನೆ ವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪಿಯುಸಿ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ 10 ದಿನಗಳಲ್ಲಿ ಮುಗಿಯುವ ಸಾಧ್ಯತೆ ಇದೆ. ಎಸ್ ಎಸ್‌ಎಲ್ ಸಿ ಮೌಲ್ಯಮಾಪನ ಕಾರ್ಯ ಏ. 10 ಕ್ಕೆ ಆರಂಭವಾಗಲಿದೆ ಎಂದು ಶಿಕ್ಷಣ ಮಂಡಳಿ ತಿಳಿಸಿದೆ. 2019 ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆಯನ್ನು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಮುಗಿಸಿದ್ದು, ಏ. 10 ಕ್ಕೆ ಮೌಲ್ಯ ಮಾಪನ ಕಾರ್ಯ ಆರಂಭವಾಗಲಿದೆ. ರಾಜ್ಯದ 230 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದ್ದು, 72 ಸಾವಿರ ಮೌಲ್ಯಮಾಪಕರಿಗೆ ಪತ್ರ ಬರೆದಿದೆ. ಮೌಲ್ಯ ಮಾಪನ ಕಾರ್ಯ ಕಡ್ಡಾಯವಾಗಿದ್ದು, ತಪ್ಪದೇ ಭಾಗವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್..

Edited By

Manjula M

Reported By

Manjula M

Comments