ಸಂಸದ ಜಿಟಿ ದೇವೇಗೌಡರು ಪ್ರಯಾಣಿಸುತ್ತಿದ್ದ ಕಾರು ಅಪಘಾತ!!!

02 Apr 2019 12:16 PM | General
6856 Report

ಸಚಿವ ಜಿ ಟಿ ದೇವೇಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಘಟನೆ ಸಂಭವಿಸಿದ್ದು, ಕಾರಿಗೆ ಎದುರಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಸಂಸದ ದೇವೇಗೌಡರು ಕಾರ್ಯಕ್ರಮವೊಂದರ ನಿಮಿತ್ತ ಮಳವಳ್ಳಿ ಕಡೆ ಹೋಗುತ್ತಿದ್ದರೆನ್ನಲಾಗಿದೆ.

ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಸಚಿವರು ಸೇರಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಸದ್ಯ  ಕಾರನ್ನು ಅಲ್ಲಿಯೇ ಬಿಟ್ಟು ಪ್ರಚಾರವನ್ನು ಮುಂದುವರೆಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜಿಟಿಡಿ ಅವರ ಪ್ರಭಾವ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು ಹಾಗಾಗಿ ಕಾಂಗ್ರೆಸಿಗರು ಜಿ.ಟಿ.ದೇವೇಗೌಡರನ್ನು ಬಿಟ್ಟು ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸುವುದು ಕಷ್ಟ ಸಾಧ್ಯ. ಜಿಟಿಡಿ ಮುನಿಸು ರಾಜ್ಯಕ್ಕೆ  ಗೊತ್ತಿರುವ ವಿಚಾರ. ಕಾಂಗ್ರೆಸ್ ನಾಯಕರು ಜಿಟಿಡಿ ಮನವೊಲಿಸಿ ಪ್ರಚಾರಕ್ಕೆ ಕರೆತರಲು ಶತಾಯಗಾಯ ಪ್ರಯತ್ನಿಸುತ್ತಿದ್ದಾರೆ.ಒತ್ತಾಯಕ್ಕೆ ಮಣಿದು ಮೈತ್ರಿ ಅಭ್ಯರ್ಥಿ ಪರ ಜಿಟಿಡಿ ಕ್ಯಾಂಪೇನ್ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

Edited By

Kavya shree

Reported By

Kavya shree

Comments