ಇಂದಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪೇನ್ : ಎಲ್ಲೆಲ್ಲಿ ಗೊತ್ತಾ..?!!!

01 Apr 2019 11:53 AM | General
382 Report

ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್  ಮಂಡ್ಯಕ್ಕೆ ಆಗಮಿಸಿದ್ದಾರೆ. ಸುಮಲತಾ ಪರ ಪ್ರಚಾರ ಮಾಡೋಕೆ ಭರ್ಜರಿ ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಇಂದಿನಿಂದ ಮಂಡ್ಯದಲ್ಲಿ ಡಿ ಬಾಸ್ ಹವಾ ಶುರುವಾಗಲಿದೆ. ಚಾಲೆಂಜಿಂಗ್ ಸ್ಟಾರ್ ಅಬ್ಬರ ಹಳ್ಳಿ ಹಳ್ಳಿಗಳಿಗೂ ಮುಟ್ಟಲಿದೆ. ಅಂದಹಾಗೇ ದರ್ಶನ್ ಅಭಿಮಾನಿಗಳು ಸಮಾಜಿಕ ಜಾಲತಾಣಗಳಲ್ಲಿ ದರ್ಶನ್ ಪರ ಬ್ಯಾಟ್ ಬೀಸಲು ಶುರು ಮಾಡಿದ್ದಾರೆ.

ಇದಕ್ಕೂ ಮುನ್ನ ಸುಮಲತಾ ಪರ  ಬಹಿರಂಗವಾಗಿ ಮಾತನಾಡಿದ ದರ್ಶನ್ ಶೂಟಿಂಗ್ ಗೆ ರಜಾ ಹಾಕಿ, ಒಂದು ತಿಂಗಳು ಕಾಲ ಮಂಡ್ಯದಲ್ಲೀಯೇ ನಾನು ಮತ್ತು ಯಶ್ ಉಳಿದುಕೊಳ್ಳುತ್ತೇವೆ ಎಂದಿದ್ದರು.  ಆದರೆ ಇದ್ದಕ್ಕಿದ್ದಂತೇ ಯಾವ ಮಾಹಿತಿ ಕೊಡೆದೇ ಮಂಡ್ಯದಿಂದ ನಾಪತ್ತೆಯಾಗಿದ್ದರು. ಈ ಸಮಯದಲ್ಲಿ  ಜೆಡಿಎಸ್ ಅಭಿಮಾನಿಗಳಿಂದ, ನಾಯಕರಿಂದ ದರ್ಶನ್ ಮತ್ತಯ ಯಶ್ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದರು. ಆದರೆ ಈ ಬಾರಿ ದರ್ಶನ್ ಖಡಕ್ ಆಗಿಯೇ ಒಂದು ಮಾತು ಹೇಳಿದ್ದಾರೆ. ನಾನ್ ಟಾಂಗ್ ಕೊಡೋಕೆ ಬರೋಲ್ಲ, ಕೊಡೋದೇ ಹಾಗಿದ್ರೆ ಬೇಜಾನ್ ಸಿನಿಮಾ ಡೈಲಾಗ್ ಬರುತ್ತೆ ಎಂದು  ವ್ಯಂಗ್ಯವಾಗಿ ಮಾತನಾಡಿ ಅಭಿಮಾನಿಗಳಿಗೆ ತಾಳ್ಮೆಯಿಂದಿರಿ, ಅವರಾಗೆ ನಾವು ನಡೆದುಕೊಳ್ಳುವುದು ಬೇಡ ಎಂದಿದ್ದರು. ಸದ್ಯ ಇಂದು ಅಧಿತವಾಗಿ ಪ್ರಚಾರಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟಿರುವ ಡಿ ಬಾಸ್  ಏಪ್ರಿಲ್ 1 ರಿಂದ 16 ರವರೆಗೆ ತಮ್ಮನ್ನು ಸಂಪೂರ್ಣವಾಗಿ ಪ್ರಚಾರ ತೊಡಗಿಸಿಕೊಳ್ಳುತ್ತಿದ್ದಾರಂತೆ. ಅದರಂತೇ ಇಂದು ಕೆ.ಆರ್.ಎಸ್. ನಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ನಾನು ಯಾರ ವಿರುದ್ಧವಾಗಿ ಮಾತನಾಡುವುದಿಲ್ಲ. ನೀವು ಅಮ್ಮನಿಗೆ ಕೊಡುವ ಓಟಿನ ಮೂಲಕ ತಿರುಗೇಟು ಕೊಡೋಣವೆಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ನೋಡಲು ಜನ ಕಿಕ್ಕಿರಿದು ತುಂಬಿದ್ದರು. ಶಿಳ್ಳೆ, ಚಪ್ಪಾಳೆ ಮೂಲಕ ಅಭಿಮಾನದಿಂದ ಸ್ವಾಗತಿಸಿ ಸುಮಲತಾ ಮತ್ತು ದರ್ಶನ್ ಗೆ ಬೆಂಬಲ ಸೂಚಿಸುತ್ತಿದ್ದ ದೃಶ್ಯ ಕಂಡು ಬಂತು. ಇಂದು 20 ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ಕೊಡುವ ಸಾಧ್ಯತೆ ಇದೆ. ಕೆ ಆರ್ ಎಸ್ ಮೂಲಕ ಆ ನಂತರ ಮಂಡ್ಯ ಸಿಟಿಯ ಅಕ್ಕ ಪಕ್ಕದ ಗ್ರಾಮಗಳ ಬರಲಿದ್ದಾರೆಂಬ ಮಾಹಿತಿ ಇದೆ.

Edited By

Kavya shree

Reported By

Kavya shree

Comments

Cancel
Done