ಭಾನುವಾರ ಸರ್ಕಾರಿ ಬ್ಯಾಂಕ್’ಗಳಿಗೆ ರಜೆ ಇರಲ್ಲ….!!!

ಸರ್ಕಾರಿ ವಹಿವಾಟು ನಡೆಸುವ ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಭಾನುವಾರದಂದು ಸಾಮನ್ಯವಾಗಿ ರಜೆ ಇರುತ್ತದೆ. ಆದರೆ ಈ ವರ್ಷ ಮಾರ್ಚ್ 31 ರಂದು ಬ್ಯಾಂಕ್’ಗಳೆಲ್ಲಾ ಶಾಖೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹೌದು ಬರುವ ಭಾನುವಾರದಂದು ಬ್ಯಾಂಕ್ ಗಳು ಸರ್ಕಾರಿ ಪಾವತಿ ಮತ್ತು ರಶೀದಿಗಾಗಿ ಎಲ್ಲಾ ಶಾಖೆಗಳು ಕಾರ್ಯ ನಿರ್ವಹಿಸ ಬೇಕೆಂದು ಆರ್'ಬಿಐ ಎಲ್ಲಾ ಬ್ಯಾಂಕ್ ಗಳಿಗೂ ಸುತ್ತೋಲೆ ಹೊರಡಿಸಿದೆ.
ಹೌದು ಹಣಕಾಸು ವರ್ಷದ ಕೊನೆಯ ದಿನ ಮಾರ್ಚ್ 31 ಭಾನುವಾರದಂದು ಬಂದಿರುವ ಹಿನ್ನಲೆಯಲ್ಲಿ ಬ್ಯಾಂಕುಗಳು ಭಾನುವಾರವೂ ಕೆಲಸ ಮಾಡಲಿವೆ ಎಂದು ಆರ್'ಬಿಐ ಹೇಳಿದೆ. ಕೇಂದ್ರ ಸರ್ಕಾರ ಸೂಚನೆ ನೀಡಿರುವುದರಿಂದ, ಎಲ್ಲ ಬ್ಯಾಂಕ್ ಗಳು ಭಾನುವಾರ ಕೆಲಸ ಮಾಡಬೇಕೆಂದು ಆರ್'ಬಿಐ ಸೂಚನೆ ನೀಡುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಿದೆ. ಸರ್ಕಾರಿ ವಹಿವಾಟು ನಡೆಸುವ ಎಲ್ಲಾ ಬ್ಯಾಂಕುಗಳು ಮಾರ್ಚ್ 30, ರಂದು ರಾತ್ರಿ 8 ಗಂಟೆಯವರೆಗೆ ಹಾಗೂ ಮಾರ್ಚ್ 31 ರಂದು ಸಂಜೆ ಆರು ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಏಪ್ರಿಲ್ 1 ರಂದು ಹಣಕಾಸು ವರ್ಷ ಬದಲಾಗಲಿದೆ.
Comments