ರೆಬೆಲ್ ಸ್ಟಾರ್ ವಿರುದ್ಧ ಮಾತನಾಡಿ ರಮ್ಯಾ ತಾಯಿ ಕಣ್ಣೀರು ಸುರಿಸಿದ್ಯಾಕೆ..?!!!

29 Mar 2019 12:36 PM | General
688 Report

ನಾನು ಮಂಡ್ಯದ ಮಗಳು. ನಮಗೆ ಹಣ, ಆಸ್ತಿ, ಸಂಪತ್ತು ಐಶ್ವರ್ಯ ಎಲ್ಲವೂ ಇತ್ತು. ಆದರೆ ಅದನ್ನೆಲ್ಲಾ ಬಿಟ್ಟು ಈ ಮಣ್ಣಿನ ಋಣ ತೀರಿಸೋಕೆ ಇಲ್ಲಿಗೆ ಬಂದಿದ್ದೇವೆ. ನಾನು ಈ ಮಣ್ಣಿನ ಮಗಳು. ಮಂಡ್ಯದ ಮಣ್ಣಿನ  ಋಣ ತೀರಿಸೋಕೆ, ಜನರ ಸೇವೆ ಮಾಡೋಕೆ ನಾವಿಲ್ಲಿಗೆ ಬಂದಿದ್ದೇವೆ ಎಂದು ಕಣ್ಣೀರು ಸುರಿಸಿದ್ದಾರೆ ರಮ್ಯಾ ತಾಯಿ ರಂಜಿತಾ. ಯಾರ್ಯಾರೋ ಎಷ್ಟೆಷ್ಟು ಸಲ ಇಲ್ಲಿ ಗೆದ್ದಿದ್ದಾರೆ. ಆದರೆ  ಅವರೇನು ಕೆಲಸ ಮಾಡಿಲ್ಲ. ನಾವು ಕಾಂಗ್ರೆಸ್ ನಲ್ಲಿದ್ದೇವೆ, ರಮ್ಯಾಳಾಗಲೀ ನಾನಾಗಲೀ ಯಾರನ್ನು ಸೋಲಿಸೋಕೆ  ಆಗಲ್ಲ ಎಂದು ರಂಜಿತಾ ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅಂಬಿ ವಿರುದ್ಧವಾಗಿ ಮಾತನಾಡಿದ ರಂಜಿತಾ ಅವರು...

Image result for ramya mother ranjitha

ರಮ್ಯಾಗೆ ಮಂಡ್ಯದಲ್ಲಿ ಟಿಕೆಟ್ ಕೈ ತಪ್ಪಿದ್ದು  ಅಂಬರೀಶ್ ರಿಂದಲೇ. ಆ ವಿಚಾರ ಮಂಡ್ಯ ಅಲ್ಲಾ ಇಡೀ ದೇಶಕ್ಕೆ ಗೊತ್ತು. ಜೆಡಿಎಸ್ ಗೆ ಸಪೋರ್ಟ್ ಮಾಡಿ  ಕಾಂಗ್ರೆಸ್ ಹೇಳ ಹೆಸರಿಲ್ದಂಗೆ ಮಂಡ್ಯದಲ್ಲಿ ಮಾಡಿದ್ದು ಅವರೇ ಎಂದು ಅಂಬಿ ಹೆಸರೇಳದೇ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಮಂಡ್ಯದಲ್ಲಿ ಅಸ್ಥಿತ್ವ ಇಲ್ಲದಂತೇ ಮಾಡಿದವರೇ ಅಂಬರೀಶ್. ರಮ್ಯಾರನ್ನು ಸೋಲಿಸಿದ್ದು ಯಾರು ಅಂತಾ ಜನಕ್ಕೆ ಗೊತ್ತು.

Image result for ramya mother with sumalathaಇಂದಿಗೂ ರಮ್ಯಾ ಮೇಲೆ ಮಂಡ್ಯ ಜನಕ್ಕೆ ಕರುಣೆ ಇದೆ.ಮಂಡ್ಯದಲ್ಲಿ ಅನೇಕರು ತುಂಬಾ ಸಲ ಗೆದ್ದಿದ್ದಾರೆ. ಅವರಿಗೆ ಕೆಲಸ ಮಾಡೋಕೆ ಟೈಮ್ ಇತ್ತು. ಆದರೆ  ಕೆಲಸನೂ ಮಾಡಿಲ್ಲ, ಋಣನೂ ತೀರಿಸಿಲ್ಲವೆಂದು ಅಂಬಿ ವಿರುದ್ಧ ಮಾತನಾಡಿದರು.ಇದೀಗ ಮೈತ್ರಿ ಸರ್ಕಾರವಿದೆ. ನಾವು ಸದಾ ಕಾಂಗ್ರೆಸ್ ನವರೆ. ಮೈತ್ರಿ ಸರ್ಕಾರದ ಸ್ಪರ್ಧಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಿದ್ದಾರೆ ಅವರ ಪರ ಪ್ರಚಾರ ಮಾಡೋಕೆ ನಾವು ರೆಡಿಯಾಗಿದ್ದೇವೆ ಎಂದರು.

Edited By

Kavya shree

Reported By

Kavya shree

Comments