ಪ್ರಧಾನಿ ಮೋದಿ ವಿರುದ್ಧ ದೂರು ನೀಡಿದ ರಮ್ಯಾ..?!!!

29 Mar 2019 12:34 PM | General
208 Report

ಮಾಜಿ ಸಂಸದೆ ರಮ್ಯಾ, ಬಿಜೆಪಿಯವರ ವಿರುದ್ಧ ಮಾತನಾಡಿ ಒಂದಿಲ್ಲೊಂದು ವಿವಾದಕ್ಕೀಡಾಗುತ್ತಲೇ ಇದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಸಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ,  ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ಮತದಾರರಿಗೆ ಆಮೀಷವೊಡ್ಡುತ್ತಿದೆ ಎಂದು ಆರೋಪಿಸಿ ರಮ್ಯಾ ಆಯೋಗಕ್ಕೆ ದೂರು ನೀಡಿದ್ದಾರೆ. ತಾನು ದೂರು ನೀಡಿರುವ ಪ್ರತಿಯನ್ನು  ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ಅಪ್ ಲೋಡ್ ಮಾಡಿದ್ದಾರೆ. ಅಂದಹಾಗೇ ಬಿಜೆಪಿ ‘ಮೈ ಫಸ್ಟ್  ಓಟ್ ಫಾರ್ ಮೋದಿ’ ಎಂಬ ಫೇಸ್ ಬುಕ್ ಖಾತೆಯ ಮೂಲಕ ಮತದಾರರನ್ನು ಓಲೈಸುತ್ತಿದೆ.

ಬ್ಯಾಡ್ಜ್, ಬ್ಯಾಗ್ಸ್ ಟೀ ಶರ್ಟ್, ಫೋನ್ ಕವರ್ಸ್ ಹಾಗೂ ಟೋಪಿಗಳನ್ನು ಉಚಿತ ಉಡುಗೊರೆಗಾಗಿ ಮೋದಿಗೆ ವೋಟ್ ಮಾಡಿ ಎಂದು ಆಮಿಷವೊಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಬಿಜೆಪಿ ಪ್ರಚಾರಕ್ಕಾಗಿ ಫೇಸ್ ಬುಕ್ ಪೇಜ್ ಗಳನ್ನು ಹಾಗೂ ವೆಬ್ ಸೈಟ್ ಗಳ ವಿರುದ್ಧ ತಕ್ಷಣದಿಂದಲೇ ಕ್ರಮಕೈಗೊಳ್ಳಿ ಎಂದು ರಮ್ಮಾ ಅವರು ಒತ್ತಾಯಿಸಿದ್ದಾರೆ.


ಇತ್ತೀಚಿಗಷ್ಟೇ ಬಿಜೆಪಿ  ನಾಯಕ,  ನಟ ಜಗ್ಗೇಶ್ ಅವರು ರಮ್ಯಾ ವಿರುದ್ಧ ಹಾರಿಹಾಯ್ದಿದ್ದರು. ಮೋದಿ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲದವಳು ಎಂದು ಏಕ ವಚನದಲ್ಲಿಯೇ  ರಮ್ಯಾರನ್ನು ಉದ್ದೇಶಿಸಿ ಮಾತನಾಡಿದ್ದರು. ರಮ್ಯಾ ತಾಯಿ ರಂಜಿತಾ ಅವರು ಮಾತನಾಡಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾಂಗ್ರೆಸ್’ಗೆ ಏನು ಮಾಡಿಲ್ಲ. ಮಂಡ್ಯ ಅಭಿವೃದ್ಧಿಗೆ ಅಂಬರೀಶ್ ಅವರ ಕೊಡುಗೆ ಶೂನ್ಯ. ಈ  ಬಾರಿ ದೋಸ್ತಿ ಸರ್ಕಾರದಿಂದ ನಿಖಿಲ್ ಅವರು ಸ್ಪರ್ಧಿಸುತ್ತಿದ್ದಾರೆ.  ನಾವು ನಿಖಿಲ್ ಪರವೇ ಚುನಾವಣೆ ಪ್ರಚಾರ ಮಾಡ್ತೀವಿ ಎಂದಿದ್ದಾರೆ.

Edited By

Kavya shree

Reported By

Kavya shree

Comments