ಡಿ-ಬಾಸ್ ಅನ್ನೋದು ಅಭಿಮಾನಿಗಳು ಕೊಟ್ಟ ಭಿಕ್ಷೆ..!! ಚಾಲೆಂಜಿಂಗ್ ಸ್ಟಾರ್ ನ ಮನದಾಳದ ಮಾತು..!!!

27 Mar 2019 4:28 PM | General
233 Report

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗೊಂದಲಗಳು ಕೂಡ ಹೆಚ್ಚಾಗಿಯೇ ಇವೆ..ಅದರಲ್ಲೂ ಮಂಡ್ಯ ಅಖಾಡ ಮಾತ್ರ ರಣರಂಗವಾಗುತ್ತಿದೆ..ಒಂದು ಕಡೆ ಮುಖ್ಯಮಂತ್ರಿ ಪುತ್ರ ನಿಖಿಲ್ ಮತ್ತೊಂದು ಕಡೆ ರೆಬಲ್ ಪತ್ನಿ ಸುಮಲತಾ ಅಂಬರೀಶ್ ಇಬ್ಬರೂ ಕೂಡ ಅಖಾಡಕ್ಕೆ ಇಳಿದಿದ್ದಾಗಿದೆ… ಸುಮಲತಾ ಪರ  ಈಗಾಗಲೇ ದರ್ಶನ್ ಯಶ್ ಇಬ್ಬರು ಪ್ರಚಾರ ಮಾಡಿದ್ದರು.. ಇದರಿಂದ ಕೆಂಡಾಮಂಡಲವಾದ ದೋಸ್ತಿ ಸರ್ಕಾರವು ದರ್ಶನ್ ಮತ್ತು ಯಶ್ ಮೇಲೆ ಕಿಡಿ ಕಾರಿದರು… ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಅವರು ಜೋಡೆತ್ತುಗಳು ಅಲ್ಲ.. ಕಳ್ಳೆತ್ತುಗಳು ಎಂದಿದ್ದರು..

ಮಂಡ್ಯ ಲೋಕಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಪ್ರಚಾರ ನಡೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್​ ಅಂದ್ರೆ ಯಾರು? ಅಂತಾ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ಡಿ ಬಾಸ್​ ಅನ್ನುವುದು ನನಗೆ ಅಭಿಮಾನಿಗಳು ಕೊಟ್ಟ ಭಿಕ್ಷೆ. ಬೇರೆ ಯಾರೂ ಅಲ್ಲ ಅಂತಾ ಟಾಂಗ್ ನೀಡಿದರು. ಮೊನ್ನೆ ದರ್ಶನ್ ವಿರುದ್ಧ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ, ಅದೆನೋ ಡಿ ಬಾಸ್ ಡಿಬಾಸ್ ಅಂತೆ, ಸಿನಿಮಾದಲ್ಲಿ ಡಿ ಬಾಸ್.. ಜನಗಳ ಮುಂದೆ ಯಾವತ್ತೂ ಡಿ ಬಾಸ್ ಆಗ್ಲಿಕೆ ಆಗಲ್ಲ. ಡಿ ಬಾಸ್​ ಅಂದ್ರೆ ಯಾರು? ಅಂತಾ ಕೇಳಿದ್ದರು. ಅಲ್ಲದೇ ಯಶ್​ ಹಾಗೂ ದರ್ಶನ್ ಅವ್ರನ್ನ ಕಳ್ಳ ಎತ್ತುಗಳು ಅಂತಲೂ ಕರೆದಿದ್ದರು. ಆದ್ರೆ, ಅದ್ಯಾವುದಕ್ಕೂ ದಾಸ ದರ್ಶನ್ ಮಾತ್ರ ಉತ್ತರಿಸುವ ಗೋಜಿಗೆ ಹೋಗಿಲ್ಲ. ಒಟ್ಟಾರೆ ಮಗನನ್ನು ಗೆಲ್ಲಿಸಲು ಕುಮಾರಸ್ವಾಮಿಯವರು ಟೊಂಕಕಟ್ಟಿ ನಿಂತಿದ್ದಾರೆ. ಸುಮಲತಾ ಅವರನ್ನು ಸೋಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

Edited By

Manjula M

Reported By

Manjula M

Comments